More

    ಮೇಲಿನ ಮನೆಯ ಶೋಯಬ್, ಕೆಳಗಿನ ಮನೆಯ ಶಾಜಿಯಾ ಒಂದೇ ದಿನ ಗಾಯಬ್!

    ಬೆಂಗಳೂರು: ಮೇಲಿನ ಮನೆಯಲ್ಲಿದ್ದ ವೆಲ್ಡಿಂಗ್ ಕೆಲಸದ ವಿವಾಹಿತ ವ್ಯಕ್ತಿ, ಕೆಳಗಿನ ಮನೆಯಲ್ಲಿದ್ದ ಸೆಂಟ್ರಿಂಗ್ ಕೆಲಸದವನ ಹೆಂಡತಿ ಒಂದೇ ದಿನ ಕಾಣೆಯಾದ ಪ್ರಕರಣವೊಂದು ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೇಲಿನ ಮನೆಯವನ ಹೆಂಡತಿ, ಕೆಳಗಿನ ಮನೆಯವಳ ಗಂಡ ಪೊಲೀಸರಿಗೆ ದೂರು ನೀಡಿದ್ದಾರೆ.

    ಡಿ. 9ರಂದು ಇವರಿಬ್ಬರೂ ಕಾಣೆಯಾಗಿದ್ದು, ಅದಾಗಿ ಒಂದು ತಿಂಗಳು ಕ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ತನ್ನ ಪತಿ ಕಾಣೆಯಾಗಿದ್ದು ಹುಡುಕಿ ಕೊಡಿ ಎಂದು ಝೀನತ್ ಎಂಬಾಕೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನ್ನ ಪತ್ನಿಯನ್ನು ಹುಡುಕಿ ಕೊಡಿ ಎಂದು ಮುಬಾರಕ್ ಎಂಬಾತನೂ ಪೊಲೀಸರಿಗೆ ದೂರು ನೀಡಿದ್ದಾನೆ.

    37 ವರ್ಷದ ನನ್ನ ಗಂಡ ಶೋಯಬ್​ (ಮಹಮ್ಮದ್ ನವೀದ್) ವೆಲ್ಡಿಂಗ್ ವೃತ್ತಿ ಮಾಡಿಕೊಂಡಿದ್ದು, ಡಿ. 9ರಂದು ಬೆಳಗ್ಗೆ 6 ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಸ್ಯಾಂಟ್ರೊ ಕ್ಸಿಂಗ್ ಕಾರಲ್ಲಿ ಹೋಗಿದ್ದು, ಅಂದಿನಿಂದ ಇಂದಿನವರೆಗೂ ವಾಪಸ್ ಬಂದಿಲ್ಲ. ಹನ್ನೆರಡು ವರ್ಷಗಳ ಹಿಂದೆ ನಮ್ಮ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ನಾನು ಗೃಹಿಣಿಯಾಗಿ ಮನೆಯಲ್ಲಿದ್ದು, ಪತಿಯನ್ನು ಹುಡುಕಿ ಕೊಡಿ ಎಂದು ಝೀನತ್ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ.

    ಪತಿಯ ಬಗ್ಗೆ ಸ್ನೇಹಿತರು, ಸಂಬಂಧಿಕರ ಬಳಿ ವಿಚಾರಿಸಿದ್ದರೂ ಮಾಹಿತಿ ಸಿಕ್ಕಿಲ್ಲ. ನಾವಿರುವ ಕೆಳಗಿನ ಮನೆಯಲ್ಲಿ ವಾಸ ಮಾಡುತ್ತಿರುವ ಮುಬಾರಕ್ ಪತ್ನಿ ಶಾಜಿಯಾ ಕೂಡ ಅದೇ ದಿನದಿಂದ ಕಾಣಿಸುತ್ತಿಲ್ಲ. ಅವಳ ಜೊತೆ ನನ್ನ ಗಂಡ ಹೋಗಿರಬಹುದು ಎಂಬ ಗುಮಾನಿ ನನಗಿದ್ದು, ಎಲ್ಲ ಕಡೆ ಹುಡುಕಿದ್ದರೂ ಪತ್ತೆಯಾಗದ ಕಾರಣ ದೂರು ನೀಡುತ್ತಿದ್ದೇನೆ ಎಂಬುದಾಗಿ ತಿಳಿಸಿದ್ದಾಳೆ.

    ಇದನ್ನೂ ಓದಿ: ಶಾಲೆಯಲ್ಲಿ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ್ಲು 8ನೇ ತರಗತಿ ವಿದ್ಯಾರ್ಥಿನಿ

    ನಾನು ನನ್ನ ಹೆಂಡತಿ ಮತ್ತು ಇಬ್ಬರ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿರುತ್ತೇನೆ. ಜೀವನಕ್ಕಾಗಿ ಸೆಂಟ್ರಿಂಗ್​ ಕೆಲಸ ಮಾಡಿಕೊಂಡಿರುತ್ತೇನೆ. ನಾನು ಮತ್ತು ನನ್ನ ಹೆಂಡತಿ ಒಳ್ಳೆಯ ರೀತಿಯ ಜೀವನ ಮಾಡಿಕೊಂಡಿರುತ್ತೇವೆ. ನನ್ನ ಹೆಂಡತಿ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಇರುತ್ತಾಳೆ. ಡಿ. 8ರಂದು ರಾತ್ರಿ ಎಷ್ಟು ಹೊತ್ತಾದರೂ ಮೊಬೈಲ್ ಪೋನ್​ ನೋಡಿಕೊಂಡಿದ್ದಕ್ಕೆ ಬೈದು ನಂತರ ಮಲಗಿಕೊಂಡುರುತ್ತೇನೆ. ಮರುದಿನ ಬೆಳಗ್ಗೆ 5.30ಕ್ಕೆ ಹೆಂಡತಿಗೆ ಹೇಳಿ ಕೆಲಸಕ್ಕೆ ಹೋಗಿದ್ದೆ. ಅದೇ ದಿನ ಬೆಳಗ್ಗೆ 9-30ಕ್ಕೆ ಹೆಂಡತಿಗೆ ಕರೆಮಾಡಿ ಏನು ಮಾಡುತ್ತಿದ್ದೀಯಾ? ಎಂದು ವಿಚಾರಿಸಿದಾಗ ಮೊದಲನೇ ಮಗಳನ್ನು ಶಾಲೆಗೆ ಬಿಡಲು ಹೋಗುತ್ತಿದ್ದೇನೆ ಎಂದಿದ್ದಳು.

    ನಂತರ 10 ಗಂಟೆಗೆ ಕರೆಮಾಡಿದಾಗ ಮೊಬೈಲ್​ಫೋನ್ ಸ್ವಿಚ್ಡ್​ ಆಫ್ ಇತ್ತು. ಗಾಬರಿಗೊಂಡು ಸುಮಾರು 10.30ಕ್ಕೆ ಮನೆಗೆ ಹೋಗಿ ನೋಡಿದಾಗ ಡೋರ್ ಲಾಕ್ ಆಗಿತ್ತು. ಮನೆಯ ಕೀ ಮಾಲೀಕರಿಗೆ ಕೊಟ್ಟಿದ್ದು, ಗಂಡ ಬಂದರೆ ಕೊಡಿ ಎಂದು ಹೇಳಿ ಹೋಗಿದ್ದಳಂತೆ. ಮನೆಯ ಒಳಗೆ ಹೋಗಿ ನೋಡಿದಾಗ ಅವಳು ಬಳಸುತ್ತಿದ್ದ ಮೊಬೈಲ್​ಫೋನ್​ ಮನೆಯಲ್ಲೇ ಇತ್ತು. ಹೆಂಡತಿಯನ್ನು ಅವರ ತಾಯಿ ಮನೆ, ಸ್ನೇಹಿತರು ಮತ್ತು ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ. ಆದ್ದರಿಂದ ನನ್ನ ಹೆಂಡತಿ ಮತ್ತು ಮಗುವನ್ನು ಪತ್ತೆ ಮಾಡಿಕೊಡಬೇಕೆಂದು ಮುಬಾರಕ್ ಪೊಲೀಸರಿಗೆ ದೂರು ನೀಡಿದ್ದಾನೆ.

    ಪೈಲಟ್ ಕೆಲಸಕ್ಕೇ ಮುಳುವಾದ ‘ಮೂತ್ರ ವಿಸರ್ಜನೆ’; ಏರ್​ ಇಂಡಿಯಾದ ಪ್ರಕರಣ ‘ಒಂದಕ್ಕೆ’ 30 ಲಕ್ಷ ರೂ. ದಂಡ

    ‘ಓಂ’ ಇದ್ದ ಹಾಳೆಯಲ್ಲಿ ಶುಭಾಶಯ ಬರೆಯಲು ಒಪ್ಪದ ತನ್ವೀರ್ ಸೇಠ್!; ಕನ್ನಡ ಮತ್ತು ಸಂಸ್ಕೃತಿ ಸಚಿವರ ಎದುರೇ ತಕರಾರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts