More

    ಈ ಲೇಡಿ ಅಂಬಾನಿ ಬಗ್ಗೆ ನಿಮಗೆಷ್ಟು ತಿಳಿದಿದೆ? ಸ್ಟಾರ್​ ನಟನ ಪತ್ನಿ, ಈಕೆಯ ಅಳಿಯ ಕನ್ನಡಿಗ, ಒಟ್ಟು ಆಸ್ತಿ ಬೆರಗಾಗುವಂತಿದೆ

    ನವದೆಹಲಿ: ಅಂಬಾನಿ ಕುಟುಂಬ ಭಾರತದಲ್ಲೇ ಅತಿ ಶ್ರೀಮಂತ ಕುಟುಂಬ ಎಂಬುದು ಎಲ್ಲರಿಗು ತಿಳಿದಿರುವ ಸಂಗತಿ. ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿಯಿಂದ ಅವರ ಮಕ್ಕಳಾದ ಆನಂದ್ ಅಂಬಾನಿ, ಆಕಾಶ್ ಅಂಬಾನಿ ಮತ್ತು ಇಶಾ ಸದಾ ಸುದ್ದಿಯಲ್ಲಿರುವ ತಾರೆಗಳು. ಆದರೆ, ಅಂಬಾನಿ ಕುಟುಂಬಕ್ಕೆ ಸಂಬಂಧಿಸದ ಅಂಬಾನಿ ಹೆಸರಿರುವ ಮಹಿಳೆಯೊಬ್ಬರಿದ್ದಾರೆ. ಅವರನ್ನು ಬಾಲಿವುಡ್​ನ ಲೇಡಿ ಅಂಬಾನಿ ಎಂದೇ ಕರೆಯಲಾಗುತ್ತದೆ. ಯಾರು ಆಕೆ ಎಂಬ ತಿಳಿದುಕೊಳ್ಳುವ ಕುತೂಹಲವಿದೆಯೇ? ಮುಂದೆ ಓದಿ.

    ಸುನೀಲ್ ಶೆಟ್ಟಿ ಬಾಲಿವುಡ್‌ನ ಹಿರಿಯ ನಟ. ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾ ಮಾತ್ರವಲ್ಲದೆ ಉದ್ಯಮ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸುನೀಲ್​ ಶೆಟ್ಟಿ ಸಕ್ರಿಯರಾಗಿದ್ದಾರೆ. ಸುನೀಲ್ ಶೆಟ್ಟಿ ಅವರು ಬಾಲಿವುಡ್​ನ ಲೇಡಿ ಅಂಬಾನಿ ಅವರನ್ನು ವಿವಾಹವಾಗಿದ್ದಾರೆ. ಸುನೀಲ್ ಶೆಟ್ಟಿ ಅವರ ಪತ್ನಿ ಮಾನ ಶೆಟ್ಟಿ ಅವರಿಗೆ ಈ ಅಡ್ಡಹೆಸರು ಇದೆ. ಈಕೆ ಶ್ರೀಮಂತ ಉದ್ಯಮಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಮಾತ್ರವಲ್ಲದೆ, ಮಾನ ಶೆಟ್ಟಿ ಸಾಮಾಜಿಕ ಕಾರ್ಯಕರ್ತೆಯೂ ಹೌದು. ಕಳೆದ ವರ್ಷದ ಅಂಕಿ ಅಂಶಗಳ ಪ್ರಕಾರ ಮಾನ ಶೆಟ್ಟಿ ಅವರ ನಿವ್ವಳ ಆಸ್ತಿ ಎರಡು ಮಿಲಿಯನ್ ಡಾಲರ್.

    ಅಂದಹಾಗೆ ಮಾನ ಶೆಟ್ಟಿ ಅವರು ಗುಜರಾತಿ ವಾಸ್ತುಶಿಲ್ಪಿ ಇಫ್ತಿಕಾರ್ ಎಂ ಖಾದ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ವಿಲಾ ಖಾದ್ರಿ ಅವರ ಮಗಳು. ತಂದೆ ಮತ್ತು ತಾಯಿ ಮುಸ್ಲಿಂ-ಹಿಂದು ಧರ್ಮದವರು. ಸಾಮಾಜಿಕ ಕಾರ್ಯಕರ್ತೆ ಇಶಾ ಮೆಹ್ರಾ ಮತ್ತು ವಾಸ್ತುಶಿಲ್ಪಿ ರಾಹುಲ್ ಖಾದ್ರಿ, ಮಾನ ಶೆಟ್ಟಿ ಅವರ ಒಡಹುಟ್ಟಿದವರು.

    ಈ ಅಡ್ಡ ಹೆಸರು ಬರಲು ಕಾರಣವೇನು?
    15ನೇ ವಯಸ್ಸಿನಲ್ಲಿ ಮಾನ ಶೆಟ್ಟಿ ತನ್ನ ಸಹೋದರಿಯೊಂದಿಗೆ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿದರು. ಫ್ಯಾಶನ್ ಡಿಸೈನರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ‘ಮಾನ ಮತ್ತು ಇಶಾ’ ಬ್ರ್ಯಾಂಡ್​ ಮೂಲಕ ಖಾಸಗಿ ವ್ಯಕ್ತಿಗಳಿಗೆ ಬಟ್ಟೆಗಳನ್ನು ವಿನ್ಯಾಸಗೊಳಿಸಿ ಒದಗಿಸುತ್ತಿದ್ದರು. ನಂತರ ಮುಂಬೈನಲ್ಲಿ ‘ಆರ್ ಹೌಸ್’ ಎಂಬ ಲೈಫ್ ಸ್ಟೈಲ್ ಸ್ಟೋರ್ ತೆರೆದರು. ಐಷಾರಾಮಿ ಅಲಂಕಾರ ಮತ್ತು ಉಡುಗೊರೆ ಉತ್ಪನ್ನಗಳನ್ನು ಮಾರಾಟ ಮಾಡಲಾಯಿತು. ನಂತರ ಪತಿ ಸುನೀಲ್ ಶೆಟ್ಟಿ ಜತೆಗೂಡಿ ‘ಎಸ್2’ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟರು. ಈ ಯೋಜನೆಯಡಿ 6500 ಚದರ ಅಡಿಯ 21 ಐಷಾರಾಮಿ ಮನೆಗಳನ್ನು ನಿರ್ಮಿಸಲಾಗಿದೆ. ಇದು ಆಧುನಿಕ ಮತ್ತು ಐಷಾರಾಮಿ ಉಪಕರಣಗಳನ್ನು ಹೊಂದಿತ್ತು. ಸುನೀಲ್ ಶೆಟ್ಟಿಯವರ ಇತರ ವ್ಯಾಪಾರ ಉದ್ಯಮಗಳಾದ ಪ್ರೊಡಕ್ಷನ್ ಹೌಸ್‌ಗಳು, ಬ್ಯೂಟಿಕ್‌ಗಳು, ರಿಯಲ್ ಎಸ್ಟೇಟ್ ಮತ್ತು ರೆಸ್ಟೋರೆಂಟ್‌ಗಳ ಯಶಸ್ಸಿನ ಹಿಂದೆ ಮಾನ ಶೆಟ್ಟಿಯವರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ವ್ಯಾಪಾರ ಕುಶಾಗ್ರಮತಿ ಕಾರಣ. ಹೀಗಾಗಿ ಅವರಿಗೆ ಲೇಡಿ ಅಂಬಾನಿ ಹೆಸರು ಬಂದಿದೆ.

    ಇದಿಷ್ಟೇ ಅಲ್ಲದೇ ಮಾನ ಶೆಟ್ಟಿ ‘ಸೇವ್ ದಿ ಚಿಲ್ಡ್ರನ್’ ಎಂಬ ಎನ್​ಜಿಒದಲ್ಲಿ ಕಾರ್ಯಕರ್ತೆಯೂ ಆಗಿದ್ದಾರೆ. ಮಾನ ಶೆಟ್ಟಿಯವರು ಈ ಸಂಸ್ಥೆಗೆ ನಿಧಿ ಸಂಗ್ರಹಿಸಲು ಕಾಲಕಾಲಕ್ಕೆ ಪ್ರದರ್ಶನ ಇತ್ಯಾದಿಗಳನ್ನು ಏರ್ಪಡಿಸುತ್ತಾರೆ.

    ಸಿನಿಮಾ ಮೇಲೆ ಆಸಕ್ತಿ
    ಸುನೀಲ್ ಶೆಟ್ಟಿ ಅವರು ಮೊದಲ ನೋಟದಲ್ಲೇ ಮಾನ ಶೆಟ್ಟಿ ಪ್ರೀತಿಯಲ್ಲಿ ಬಿದ್ದೆ ಎಂದು ಅನೇಕ ಸಂದರ್ಶನಗಳಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ, ಇವರಿಬ್ಬರ ಸಂಬಂಧಕ್ಕೆ ಸುನೀಲ್ ಪೋಷಕರು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಒಂಬತ್ತು ವರ್ಷಗಳ ಡೇಟಿಂಗ್ ನಂತರ ಇಬ್ಬರು ವಿವಾಹವಾದರು. ಇಬ್ಬರೂ 1991 ರಲ್ಲಿ ವಿವಾಹವಾದರು. ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಅಹಾನ್ ಶೆಟ್ಟಿ ಎಂಬ ಇಬ್ಬರು ಮಕ್ಕಳಿದ್ದಾರೆ. ಅಥಿಯಾ ಶೆಟ್ಟಿ ಅವರು ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ಕೆ.ಎಲ್​. ರಾಹುಲ್​ರನ್ನು ವರಿಸಿದ್ದಾರೆ. (ಏಜೆನ್ಸೀಸ್​)

    ನಾನು ಪ್ರತಿನಿತ್ಯ ಕಣ್ಣೀರಿಡುತ್ತಿದ್ದೆ, ಇದೇ ನನ್ನ ಕೊನೆಯ ತೆಲುಗು ಸಿನಿಮಾ! ಮೃನಾಲ್​ ಠಾಕೂರ್​ ಶಾಕಿಂಗ್​ ಹೇಳಿಕೆ

    ವಿರಾಟ್​ ಕೊಹ್ಲಿ ಈ ರೀತಿ ಆಡಿದ್ರೆ ಆರ್​ಸಿಬಿ ಬಳಿ ಸೋಲು ಸುಳಿಯೋದೆ ಇಲ್ಲ: ಎಬಿ ಡಿವಿಲಿಯರ್ಸ್ ಮಹತ್ವದ​ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts