More

    ಮಕ್ಕಳಾಗಲಿ ಎಂದು ಮಹಿಳೆಗೆ ಮನೆಯವರೇ ಮನುಷ್ಯರ ಎಲುಬಿನ ಪುಡಿ ತಿನ್ನಿಸಿದ್ರು!

    ಪುಣೆ: ನಾನಾ ಕಾರಣಗಳಿಗಾಗಿ ವಾಮಾಚಾರ-ಮಾಟಮಂತ್ರಗಳನ್ನು ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಮಕ್ಕಳಾಗಲಿ ಎಂದು ವಾಮಾಚಾರದ ಮೊರೆ ಹೋಗಿದ್ದು, ಮಹಿಳೆಯೊಬ್ಬರಿಗೆ ಮನೆಯವರೇ ಮನುಷ್ಯನ ಎಲುಬಿನ ಪುಡಿ ತಿನ್ನಿಸಿದ್ದಾರೆ.

    ಪುಣೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಇಲ್ಲೊಬ್ಬಳು ಮಹಿಳೆಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಸಂತಾನಕ್ಕಾಗಿ ಆ ಮನೆಯವರು ವಾಮಾಚಾರದ ಮೊರೆ ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಗಂಡ ಹಾಗೂ ಆತನ ಮನೆಯರು ಮತ್ತು ವಾಮಾಚಾರಿ ಸೇರಿದಂತೆ ಏಳು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ತಾಂತ್ರಿಕ ಹೇಳಿದಂತೆ ಮಹಿಳೆಗೆ ಪತಿ ಹಾಗೂ ಮನೆಯವರು ಒತ್ತಾಯಪೂರ್ವಕವಾಗಿ ಎಲುಬಿನ ಪುಡಿ ತಿನ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಶಿಕ್ಷಿತ ಕುಟುಂಬದವರಾದರೂ ಅವರು ಇಂಥದ್ದೊಂದು ವಾಮಾಚಾರದ ಮೊರೆ ಹೋಗಿದ್ದರು, ಅವರೆಲ್ಲರನ್ನೂ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ನಾಯಿಯನ್ನು ನಾಯಿ ಎಂದ ಪಕ್ಕದ ಮನೆಯವನನ್ನು ಕೊಂದೇ ಬಿಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts