

Delhi: ಏಕದಿನ ತಂಡದ ನಾಯಕ ಸ್ಥಾನದಿಂದ ರೋಹಿತ್ ಶರ್ಮಾರನ್ನು ಕೈ ಬಿಟ್ಟಿರುವುದು ಅವರಿಗೆ ಅನುಕೂಲ ಎಂದು ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ( Amit Mishra)ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಿಂದ ನಿವೃತ್ತರಾಗಿರುವ ರೋಹಿತ್ಗೆ ಇನ್ನು ಮುಂದೆ ಯಾವುದೇ ಒತ್ತಡವಿರುವುದಿಲ್ಲ, ಅವರು ತಮ್ಮ ನೈಜ ಆಟ ಆಡಲು ಸ್ವಾತಂತ್ರ್ಯವಿರಲಿದ್ದು, ತಮ್ಮ ಪ್ರದರ್ಶನದ ಮೇಲೆ ಗಮನ ಹರಿಸಿ, ತಂಡದ ಗೆಲುವಿಗೆ ಕೊಡುಗೆ ನೀಡಬಹುದು.ಇದಷ್ಟೆ ಅಲ್ಲದೇ ನಾಯಕತ್ವದ ವಿವಿಧ ಅಂಶಗಳಲ್ಲಿ ಹಿಟ್ ಮ್ಯಾನ್, ಗಿಲ್‌ಗೆ ಸಹಾಯ ಮಾಡಬಹುದು ಎಂದರು.
ಗಿಲ್ ಬೇಗನೆ ನಾಯಕನಾಗುವುದು ಉತ್ತಮ ಬೆಳವಣಿಗೆ...
ಶುಭಮಾನ್ ಗಿಲ್ರನ್ನು ಈ ಹಂತದಲ್ಲಿ ನಾಯಕನನ್ನಾಗಿ ಮಾಡಿದ್ದು ಉತ್ತಮ ನಡೆ ಎಂದಿರುವ ಮಿಶ್ರಾ, ಯುವ ಆಟಗಾರನಿಗೆ ಈಗಾಗಲೇ ಐಪಿಎಲ್‌ನಲ್ಲಿ ನಾಯಕತ್ವದ ಅನುಭವ ಇರುವುದರಿಂದ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಗನೆ ಪ್ರಬುದ್ಧರಾಗಲು ಅನುಕೂಲವಾಗುತ್ತದೆ, ಅವರು ಭಾರತ ತಂಡಕ್ಕೆ ದೀರ್ಘಕಾಲ ಸೇವೆ ಸಲ್ಲಿಸಬಹುದು ಎಂದು ಭರವಸೆ ವ್ಯಕ್ತಪಡಿಸಿದರು.
ಮುಂಬರುವ ಆಸ್ಟ್ರೇಲಿಯಾ ಪ್ರವಾಸದೊಂದಿಗೆ ಭಾರತ ತಂಡವು ಗಿಲ್ ನೇತೃತ್ವದಲ್ಲಿ ಏಕದಿನ ಸರಣಿಯಲ್ಲಿ ತಮ್ಮ ಹೊಸ ಪ್ರವಾಸ ಪ್ರಾರಂಭಿಸಲಿದ್ದು, ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ತಂಡವು ಕಾಮಗರೂಗಳ ನಾಡಿಗೆ ತೆರಳಿದೆ. ಮೊದಲ ಪಂದ್ಯ ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ನಡೆಯಲಿದೆ.(ಏಜೆನ್ಸೀಸ್)