ಉತ್ತಮ ಕೆಲಸಗಳು ಮಕ್ಕಳಿಗೆ ಪ್ರೇರಣೆ

vidyarthi
ಶಾಂತಿನಿಕೇತನ ಯುವವೃಂದ ಕುಡಿಬೈಲು ಕುಚ್ಚೂರು, ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಹೆಬ್ರಿ ವತಿಯಿಂದ ವಿದ್ಯಾರ್ಥಿಗಳಿಗೆ ವಿಜಯವಾಣಿ ಉದ್ಯೋಗ ಮಿತ್ರವನ್ನು ಸಾಂಕೇತಿಕವಾಗಿ ಟ್ರಸ್ಟಿ ರಾಮಕೃಷ್ಣ ಆಚಾರ್ಯ ವಿತರಿಸಿದರು
Published on

ಹೆಬ್ರಿ: ಸಂಸ್ಕೃತಿ, ಉತ್ತಮ ಗುಣನಡತೆ, ಒಳ್ಳೆ ಮಾತುಗಳಿಂದ ಸಮಾಜದಲ್ಲಿ ಜೀವಿಸಬೇಕು. ಶಾಲೆಗಳು ದೇವಸ್ಥಾನಕ್ಕೆ ಸಮ. ಇಲ್ಲಿ ನಡೆಯುವ ಉತ್ತಮ ಕೆಲಸಗಳು ಮಕ್ಕಳಿಗೆ ಪ್ರೇರಣೆ ಆಗಬೇಕು. ವಿದ್ಯಾರ್ಥಿಮಿತ್ರದ ಪ್ರಯೋಜನ ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಎಂದು ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಪ್ರಶ್ನೆ ರಾಮಕೃಷ್ಣ ಆಚಾರ್ಯ ಹೇಳಿದರು.

ಶಾಂತಿನಿಕೇತನ ಯುವವೃಂದ ಕುಡಿಬೈಲು ಕುಚ್ಚೂರು, ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಹೆಬ್ರಿ ಸಹಯೋಗದಲ್ಲಿ ಹೆರ್ಗ ವಿಠ್ಠಲಶೆಟ್ಟಿ ಪ್ರೌಢಶಾಲೆ ಕುಚ್ಚೂರಿನಲ್ಲಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ವಿತರಿಸಿ ಮಾತನಾಡಿದರು.

ಮುಖ್ಯ ಶಿಕ್ಷಕಿ ತುಳಸಿ, ಶಾಂತಿನಿಕೇತನ ಸಂಸ್ಥಾಪಕ ರಾಜೇಶ್, ಅಧ್ಯಕ್ಷ ದೀಕ್ಷಿತ್ ನಾಯಕ್, ಆಡಳಿತ ಮಂಡಳಿ ಸದಸ್ಯರಾದ ನರೇಂದ್ರ, ನಿತಿನ್, ಶಿಕ್ಷಕರಾದ ಜಯರಾಮ ಶೆಟ್ಟಿ, ಸುರೇಶ್ ದೇವಾಡಿಗ, ಗಣೇಶ್, ರೇವತಿ, ಮಲ್ಲಿಕಾರ್ಜುನ, ಪ್ರಸರಣ ವಿಭಾಗದ ಶ್ರೀಕಾಂತ್ ಇದ್ದರು.

ಪ್ರಸ್ತುತ ಜಗತ್ತಿನಲ್ಲಿ ಯಾರಲ್ಲಿ ಕೌಶಲ ಇದೆ ಅವರು ಗೆಲ್ಲುತ್ತಾರೆ. ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಸವಾಲುಗಳಿರುವುದರಿಂದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಅವಶ್ಯಕತೆ ಇದೆ. ವಿದ್ಯಾರ್ಥಿಮಿತ್ರ ಕಲಿಕೆಗೆ ಸಹಕಾರಿ. ಶಾಂತಿನಿಕೇತನದ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ರೂಪಿಸುತ್ತೇವೆ.-ರಾಜೇಶ್ ಶಾಂತಿನಿಕೇತನ ಸಂಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net