ದಾವಣಗೆರೆ: ಯೋಗೀಶ್ವರ ಎನಿಸಿಕೊಂಡ ಶ್ರೀಕೃಷ್ಣನೆಂಬ ಸಾಗರದ ಅಂಚು, ಆಳ, ವಿಸ್ತಾರ ತಿಳಿಯಲಾಗದು. ಭೋಗ, ಸಂಪತ್ತು, ಅಧಿಕಾರ, ಪ್ರತಿಷ್ಠೆ ಇವಾವುದನ್ನೂ ಬಯಸದೆ, ಸಮಾಜದ ಹಿತ ಸಾಧಿಸಬಹುದೆಂದು ತಿಳಿಸಿದ ಕೃಷ್ಣನ ಬಾಲ್ಯವೆಲ್ಲ ವರ್ಣಮಯ. ಆತ ಮಾಡುತ್ತಿದ್ದ ತುಂಟಾಟಗಳು ಒಂದೆರಡಲ್ಲ.
ಗೋಕುಲದಲ್ಲಿ ಆತನ ತಾಯಿ ಯಶೋದೆಗೆ ನಿತ್ಯವೂ ಗೋಪಿಕೆಯರಿಂದ ದೂರು ಕೇಳುವುದೇ ಕಾಯಕವಾಗಿತ್ತು. ತಾಯಿ ಬೈಯ್ಯುವುದನ್ನು ವಿಧೇಯನಾಗಿ ಕೇಳಿಕೊಂಡು, ಮನೆ ಹೊಸಿಲು ದಾಟುತ್ತಿದ್ದಂತೆ ಕೃಷ್ಣ ಆಟ ಶುರು ಮಾಡುತ್ತಿದ್ದ.
ಎಲ್ಲ ಗೋಪಿಕೆಯರ ಮನೆಯಲ್ಲೂ ಕೃಷ್ಣನ ತುಂಟಾಟದ ಮಾತುಕತೆ ನಡೆಯುತ್ತಿತ್ತು. ಕೃಷ್ಣ ಯಾರ ಮನೆಗೆ ಯಾವ ಕಡೆಯಿಂದ ಯಾವಾಗ ಬರುತ್ತಾನೋ ಗೊತ್ತಿಲ್ಲ. ಅದೂ ಒಬ್ಬನೇ ಬರದೆ, ಗೆಳೆಯರ ಹಿಂಡು ಕಟ್ಟಿಕೊಂಡು ಬರುತ್ತಿದ್ದ.
ತಿನ್ನುವುದಕ್ಕಿಂತ ಹಾಳು ಮಾಡುವುದೇ ಜಾಸ್ತಿಯಾಗಿತ್ತು. ಇಡೀ ಮನೆಯನ್ನು ಜಾಲಾಡಿ, ಹಾಲು, ಮೊಸರು, ಬೆಣ್ಣೆ, ತುಪ್ಪವನ್ನು ಹುಡುಕುತ್ತಿದ್ದ. ಅವನ ಕಣ್ತಪ್ಪಿಸಿ ಎಲ್ಲೂ ಇಡಲು ಸಾಧ್ಯವಿರಲಿಲ್ಲ.
ಎಲ್ಲವನ್ನೂ ಕೆಳಗೆ ಬೀಳಿಸಿ, ಹರಡಿ, ತನ್ನ ಗೆಳೆಯರಿಗೆ ಕೊಟ್ಟು, ಮತ್ತಷ್ಟು ಬೆಕ್ಕು, ದನಕರುಗಳಿಗೆ ತಿನ್ನಿಸಿ ಕಾಣದಂತೆ ಮಾಯವಾಗುತ್ತಿದ್ದ.
ಗೆಳೆಯರೊಂದಿಗೆ ಹಸು ಕರುಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದ. ಅವನ್ನು ಮೇಯಲು ಬಿಟ್ಟು ಹುಡುಗರೊಂದಿಗೆ ಚಿನ್ನಿದಾಂಡು, ಬುಗರಿ ಆಡುತ್ತಿದ್ದ.
ಹುಡುಗರು ಹಸಿವು ಎಂದರೆ, ಪುಟ್ಟ ಪುಟ್ಟ ಕಲ್ಲುಗಳನ್ನು ಗುಡ್ಡೆಹಾಕಿಕೊಂಡು, ಕವಣೆ ಕೋಲಿನಿಂದ ಸಮೀಪದ ಮಾವಿನ ಮರಕ್ಕೆ ಬೀಸುತ್ತಿದ್ದ. ಸಾಕಷ್ಟು ಮಾವಿನಹಣ್ಣುಗಳನ್ನು ಉದುರಿಸಿ, ಅವರು ಹೊಟ್ಟೆ ತುಂಬ ತಿನ್ನಲು ಅನುವು ಮಾಡಿಕೊಡುತ್ತಿದ್ದ. ಹೀಗೆ ಆತ ತೋರಿದ ಲೀಲೆಗಳು ಲೆಕ್ಕವಿಲ್ಲದಷ್ಟು.
ಸ್ಪರ್ಧೆಗೊಂದು ಅವಕಾಶ: ಈಗ ಮನೆಮನೆಯಲ್ಲೂ ಕೃಷ್ಣರಿದ್ದಾರೆ. ಅವರ ತುಂಟಾಟಗಳನ್ನು ಫೋಟೋಗಳಲ್ಲಿ ಸೆರೆ ಹಿಡಿದು ಕಳುಹಿಸಲು ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ವಿಜಯವಾಣಿ ಡಿಜಿಟಲ್ ಅವಕಾಶ ಮಾಡಿಕೊಡುತ್ತಿದೆ. ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಹಮ್ಮಿಕೊಂಡಿರುವ ಕೃಷ್ಣವೇಷ ಫೋಟೋ ಸ್ಪರ್ಧೆಯಲ್ಲಿ 10 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ.
ಬಹುಮಾನಗಳಿಗೆ ನಲ್ಲೂರು ಶಾಂತಾರಾಮ್ ಜುವೆಲರ್ಸ್, ಜೆಮ್‌ಸಿಪ್ ಪ್ರಾಯೋಜಕರಾಗಿದ್ದು, ಇನ್‌ಸೈಟ್ಸ್ ಐಎಎಸ್ ಸಹ ಪ್ರಾಯೋಜಕರಾಗಿದ್ದಾರೆ.
ಫೋಟೋ ಕಳುಹಿಸಲು ಆ. 30 ಕೊನೇ ದಿನವಾಗಿದೆ. ಫೋಟೋ ಮತ್ತು ವಿವರಗಳನ್ನು ಕಳುಹಿಸಬೇಕಾದ ವಾಟ್ಸ್‌ಆ್ಯಪ್ ಸಂಖ್ಯೆ – 9738226802
ನಿಯಮಗಳೇನು?: ಹತ್ತು ವರ್ಷದೊಳಗಿನ ಮಗುವಿನ ಒಂದು ಫೋಟೋಗೆ ಮಾತ್ರ ಅವಕಾಶವಿದೆ.
- ಹಳೆಯ ಫೋಟೋಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
- ಫೋಟೋ ಜತೆಗೆ ಮಗುವಿನ ಹೆಸರು, ಜನ್ಮದಿನಾಂಕ, ಊರು, ವಿಳಾಸ, ದೂರವಾಣಿ ನಮೂದಿಸಬೇಕು.
- ಎಡಿಟೆಡ್ ಫೋಟೋಗಳಿಗಿಂತ ನೈಜ ಫೋಟೋಗಳಿಗೆ ಆದ್ಯತೆ ನೀಡಲಾಗುವುದು.
- ಉತ್ತಮ ಗುಣಮಟ್ಟದ ಫೋಟೋವನ್ನು ಡಾಕ್ಯುಮೆಂಟ್‌ನಲ್ಲಿ ಕಳುಹಿಸಬೇಕು.
- ಗುಣಮಟ್ಟ ಇಲ್ಲದ ಫೋಟೋಗಳನ್ನು ತಿರಸ್ಕರಿಸಲಾಗುವುದು.
- ತೀರ್ಪುಗಾರರ ತೀರ್ಮಾನವೇ ಅಂತಿಮ. ಬಹುಮಾನಗಳೇನು?
ಪ್ರಥಮ ಬಹುಮಾನ 1 ಗ್ರಾಂ ಬಂಗಾರದ ನಾಣ್ಯ
ದ್ವಿತೀಯ ಬಹುಮಾನ 20 ಗ್ರಾಂ ಬೆಳ್ಳಿ ನಾಣ್ಯ
ತೃತೀಯ ಬಹುಮಾನ 10 ಗ್ರಾಂ ಬೆಳ್ಳಿ ನಾಣ್ಯ
ಸಮಾಧಾನಕರ ಬಹುಮಾನ 5 ಗ್ರಾಂ ತೂಕದ 10 ಬೆಳ್ಳಿ ನಾಣ್ಯ