ಕೋಟ ದೊಡ್ಡ ಗಣೇಶನಿಗೆ ಸುವರ್ಣ ಸಂಭ್ರಮ

kota (7)
Published on

ಕೋಟ: ಇಲ್ಲಿನ ಕೋಟ ಅಮೃತೇಶ್ವರೀ ದೇಗುಲದಲ್ಲಿ ಕೋಟ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಗಸ್ಟ್ 27ಕ್ಕೆ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಶುಕ್ರವಾರ ಕೋಟ ಅಮೃತೇಶ್ವರೀ ದೇಗುಲದ ಸಭಾಂಗಣದಲ್ಲಿ ಮನವಿ ಪೋಸ್ಟರ್ ಅನಾವರಣ ಕಾರ್ಯಕ್ರಮ ಜರುಗಿತು.

ಕೋಟ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಆನಂದ್ ಸಿ.ಕುಂದರ್ ಪೋಸ್ಟರ್ ಬಿಡುಗಡೆಗೊಳಿಸಿ ಐವತ್ತರ ಸಂಭ್ರಮದಲ್ಲಿರುವ ನಮ್ಮ ದೊಡ್ಡ ಗಣೇಶೋತ್ಸವ ಎಂಬ ಹೆಗ್ಗಳಿಕೆ ಇದೆ. ಈ ಹಿನ್ನೆಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಹಸಿರು ಗಣೇಶೋತ್ಸವಾಗಿ ಐದು ಸಾವಿರ ಗಿಡಗಳನ್ನು ಗೀತಾನಂದ ಫೌಂಡೇಶನ್ ವತಿಯಿಂದ ವಿತರಿಸಲಿದ್ದೇವೆ. ಅಲ್ಲದೆ ಐವತ್ತರ ಸಂಭ್ರಮಕ್ಕಾಗಿ ಐವತ್ತು ಗಣಪತಿ ವಿಗ್ರಹಕ್ಕೆ ವೇದಿಕೆ ಕಲ್ಪಿಸಿ ಜನಸಾಮಾನ್ಯರಲ್ಲಿ ಪರಿಸರ ಜಾಗೃತಿ ಸಂದೇಶ ಸಾರಲಾಗುವುದು ಎಂದರು.

ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಸಮಿತಿ ಅಧ್ಯಕ್ಷರಾದ ರಮಾನಾಥ ಜೋಗಿ, ಉಪಾಧ್ಯಕ್ಷರಾದ ಶೇವಧಿ ಸುರೇಶ್ ಗಾಣಿಗ, ದೇವದಾಸ ಕಾಂಚನ್, ಕಾರ್ಯದರ್ಶಿ ಚಂದ್ರ ಆಚಾರ್, ಕೋಶಾಧಿಕಾರಿ ಶೀಲರಾಜ್ ಕಾಂಚನ್, ಸಮಿತಿಯ ಪ್ರಮುಖರಾದ ಜಗನಾಥ್ ಕಾಂಚನ್, ಉಮೇಶ್ ಕದ್ರಿಕಟ್ಟು, ಗಣೇಶ್ ಪೂಜಾರಿ, ಗಿರೀಶ್ ದೇವಾಡಿಗ, ಅಮೃತ್ ಜೋಗಿ, ಜೀವನ್ ಪೂಜಾರಿ, ಸುಧೀರ್ ಪೂಜಾರಿ, ಸತೀಶ್ ಟೈಲರ್, ರಂಜೀತ್ ಕುಮಾರ್, ಪ್ರಕಾಶ್ ಆಚಾರ್, ಸಂದೀಪ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net