ಬೆಂಗಳೂರು: ಚಿನ್ನಾಭರಣ ಬೆಲೆಯ ಹಾವು ಏಣಿ ಆಟ ಆರಂಭವಾಗಿದ್ದು, ಭಾರೀ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಕೊಂಚ ಏರಿಕೆಯಾಗಿದೆ.ಇದು ಚಿನ್ನಾಭರಣ ಪ್ರಿಯರಿಗೆ ಬೇಸರ ತರಿಸಿದೆ. ಇಂದಿನ ಚಿನ್ನ-ಬೆಳ್ಳಿಯ ದರ ಎಷ್ಟಿದೆ ಎಂದು ಇಲ್ಲಿ ತಿಳಿದುಕೊಳ್ಳೋಣ.
ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ..
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 53, 650 ರೂ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58.530 ರೂ.
ಬೆಳ್ಳಿ ಬೆಲೆ 1 ಕೆಜಿ: 70,500 ರೂ.
ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 53, 350ರೂಪಾಯಿ ಇತ್ತು. ಆದರೆ ಇಂದು 53, 650 ರೂಪಾಯಿ ಆಗಿದೆ.
ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 58.200 ರೂಪಾಯಿ ಇತ್ತು. ಆದರೆ ಇಂದು 58.530 ರೂಪಾಯಿ ಆಗಿದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಬೆಂಗಳೂರು: 53, 650 ರೂ.
ಮುಂಬೈ: 53, 650 ರೂ.
ದೆಹಲಿ: 53,800 ರೂ.
ಕೇರಳ: 53, 650 ರೂ.