
ಕಾರ್ಕಳ: ಕಾರವಾರದಲ್ಲಿ ನಡೆದ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೆಳ್ಮಣ್ ಸಂತ ಜೋಸೆಫ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವಿಜೇತಾ ಪೂಜಾರಿ ಫೈಟಿಂಗ್ ವಿಭಾಗದಲ್ಲಿ ಚಿನ್ನದ ಪದಕ, ಕಟಾ ವಿಭಾಗದಲ್ಲಿ ಬೆಳ್ಳಿ ಪದಕ, ಹುಬ್ಬಳ್ಳಿಯ ವಾಸವಿ ಮಹಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್‌ನ ಫೈಟಿಂಗ್‌ವಿಭಾಗದಲ್ಲಿ ಬೆಳ್ಳಿ ಪದಕ, ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಅವರು ಬೆಳ್ಮಣ್ ವಿಠೋಭ ಭಜನಾ ಮಂದಿರದ ಕರಾಟೆ ತರಗತಿಯಲ್ಲಿ ಶಿಕ್ಷಕ ಸತೀಶ್ ಪೂಜಾರಿ ಬೆಳ್ಮಣ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.