More

    ಲಾಕರ್‌ನಲ್ಲಿದ್ದ ಚಿನ್ನ ಸೇಫ್

    ವಿಜಯವಾಣಿ ಸುದ್ದಿಜಾಲ ವಿಟ್ಲ

    ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯಲ್ಲಿ ಕಳ್ಳತನ ಪ್ರಕರಣ ಸಂಬಂಧ ಮ್ಯಾನೇಜರ್ ಕಡಬ ನಿವಾಸಿ ರಾಮಕೃಷ್ಣ ವಿ.ಯು.(40) ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಳ್ಳತನ ಮಾಹಿತಿ ತಿಳಿದ ಗ್ರಾಹಕರು, ಶುಕ್ರವಾರ ಬ್ಯಾಂಕ್‌ಗೆ ಆಗಮಿಸಿ ಮಾಹಿತಿ ಕಲೆ ಹಾಕಲು ಪ್ರಯತ್ನಿಸಿದರೂ, ಯಾರನ್ನೂ ಒಳಗೆ ಬಿಟ್ಟಿಲ್ಲ. ಠಾಣೆಗೆ ನೀಡಿದ ದೂರಿನಲ್ಲಿ ಬ್ಯಾಂಕ್‌ನಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳಲ್ಲಿ ಎಷ್ಟು ಪ್ರಮಾಣದ ಚಿನ್ನಾಭರಣಗಳು ಮತ್ತು ನಗದು ಹಣ ಕಳವಾಗಿದೆ ಎಂಬುದನ್ನು ಪರಿಶೀಲಿಸಿ ತಿಳಿಸುವುದಾಗಿ ಹೇಳಲಾಗಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ರೀತಿಯಲ್ಲಿ ಕಳ್ಳತನ ನಡೆದಿಲ್ಲ. ಬ್ಯಾಂಕ್ ಮುಚ್ಚುವ ಸಮಯದಲ್ಲಿದ್ದ 17.28 ಲಕ್ಷ ರೂ. ಮೊತ್ತವನ್ನು ಕಳ್ಳರು ಕದ್ದೊಯ್ದಿದ್ದಾರೆ. ಚಿನ್ನದ ಮೇಲೆ ನೀಡಲಾದ ಸಾಲದ ಲಾಕರ್‌ನಲ್ಲಿದ್ದ ಚಿನ್ನ ಸುರಕ್ಷಿತವಾಗಿದ್ದು, ಇಬ್ಬರು ಗ್ರಾಹಕರ ವೈಯಕ್ತಿಕ ಲಾಕರ್ ಮಾತ್ರ ಕಳವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ. ಶಾಖೆಯಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಎಂದಿನಂತೆ ಕೆಲಸ ನಡೆಯುತ್ತಿದ್ದು, ಸಂಜೆ ಕ್ರೇನ್ ಬಳಸಿ ಹೊಸ ಲಾಕರ್ ಅಳವಡಿಸಲಾಯಿತು. ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದರು.

    ಪೊಲೀಸ್ ತನಿಖೆ ಚುರುಕು

    ಇದೇ ವೇಳೆ, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಳ್ಳತನವನ್ನು ನುರಿತ ತಂಡವೇ ಮಾಡಿರುವ ಸಾಧ್ಯತೆ ಹೆಚ್ಚೆಂಬ ಅಭಿಪ್ರಾಯಕ್ಕೆ ಬರಲಾಗಿದೆ. ಬ್ಯಾಂಕ್ ಕಳವು ಪ್ರಕರಣಲ್ಲಿ ಸ್ಥಳೀಯರ ಕೈವಾಡವನ್ನೂ ಪೊಲೀಸರು ಶಂಕಿಸಿದ್ದಾರೆ. ಕಿಟಕಿ ಸರಳುಗಳನ್ನು ಮೊದಲೇ ತುಂಡರಿಸಲಾಗಿತ್ತೇ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಸ್ಟ್ರಾಂಗ್ ರೂಮನ್ನು ತುಂಡರಿಸಲು ಕನಿಷ್ಠ 3 ತಾಸು ಬೇಕಾಗುತ್ತದೆ. ಹೀಗಾಗಿ ಪರಿಣತ ತಂಡವೇ ಈ ಕೃತ್ಯ ಎಸಗಿದೆ. ದ.ಕ.ಜಿಲ್ಲೆಯಲ್ಲಿ ಲಾಕರ್ ಒಡೆದ ಪ್ರಕರಣಗಳಲ್ಲಿ ಇದು ಮೂರನೆಯದು ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts