More

    ಮೂವರು ವಂಚಕರು ಖಾಕಿ ಬಲೆಗೆ

    ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

    ಉದ್ಯೋಗ ಕೊಡಿಸುವುದಾಗಿ ನಂಬಿಸಿ ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ನಿಶ್ಮಿತಾ ಎಂಬುವರಿಗೆ 2.25 ಲಕ್ಷ ರೂ.ವಂಚಿಸಿದ ಪ್ರಕರಣವನ್ನು ಬೇಧಿಸಿರುವ ಸಂಪ್ಯ ಪೊಲೀಸರು, ಇಬ್ಬರು ಯುವತಿಯರ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಗ್ರಾಮದ ಸುಮಿತ್ರಾಬಾಯಿ ಸಿ.ಆರ್.(23) ಮತ್ತು ಆಕೆಯ ಸಹೋದರ ರಾಹುಲ್ ಕುಮಾರ್ ನಾಯ್ಕ(19) ಹಾಗೂ ಹಾಸನ ಜಿಲ್ಲೆಯ ಶಾಂತಿಗ್ರಾಮ ತಾಲೂಕಿನ ಹಲಸಿನಹಳ್ಳಿ ನಿವಾಸಿ ಸೌಂದರ್ಯ ಎಂ.ಎಸ್(21) ಬಂಧಿತರು. ಬೆಂಗಳೂರಿನ ನಂದಿನಿ ಲೇಔಟ್ ಒಂದನೇ ಬ್ಲಾಕ್‌ನ ವಿ.ಕೆ.ರಾಮಣ್ಣ 2ನೇ ಮುಖ್ಯರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ಆರೋಪಿಗಳನ್ನು ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಂಗ ಬಂಧನ ವಿಧಿಸಿದೆ.

    ಹಲವರಿಗೆ ಮೋಸ

    ಆರೋಪಿಗಳು ಮೋಸ ಮಾಡಿದ್ದು ಪುತ್ತೂರಿನ ನಿಶ್ಮಿತಾಗೆ ಮಾತ್ರವಲ್ಲ. ಬಿ.ಸಿ.ರೋಡ್‌ನ ಯುವಕನೂ ಸೇರಿದಂತೆ ದ.ಕ.ಜಿಲ್ಲೆಯ ಮೂವರಿಗೆ ಉದ್ಯೋಗದ ಆಮಿಷ ನೀಡಿ, ನಂಬಿಸಿ ವಂಚಿಸಿದ್ದಾರೆ. ಬೆಂಗಳೂರಿನ ಹಲವರಿಗೂ ಈ ರೀತಿ ಮೋಸ ಮಾಡಿದ್ದಾಗಿ ಆರೋಪಿಗಳು ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ಹಣ ವರ್ಗಾವಣೆಗೊಂಡ ಕೂಡಲೇ ಡ್ರಾ ಮಾಡಿಕೊಳ್ಳುತ್ತಿದ್ದರು. ಹಾಗಾಗಿ ಅವರಲ್ಲಿ 60 ಸಾವಿರ ರೂ.ಮಾತ್ರ ಸಿಕ್ಕಿದೆ. ಪೊಲೀಸರು ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts