

ಗೊಳಸಂಗಿ: ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ನಿರ್ಣಾಯಕರು ಯಾವುದೇ ತಾರತಮ್ಯ ಮಾಡದೆ ಅರ್ಹ ಪ್ರತಿಭಾವಂತರನ್ನು ಗುರುತಿಸಿ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಪಿ.ಯು.ರಾಠೋಡ ಹೇಳಿದರು.
ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ 2023-24ನೇ ಸಾಲಿನ ಪ್ರತಿಭಾ ಕಾರಂಜಿ, ಕಲಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿಆರ್‌ಪಿ ವಾಣಿಶ್ರೀ ಕುಂದರಗಿ ಮಾತನಾಡಿ, ಪ್ರತಿಭೆಗೆ ಬಡತನ-ಸಿರಿತನದ ಹಂಗಿಲ್ಲ. ಮಕ್ಕಳು ಬರಿ ಪಠ್ಯಕ್ಕೆ ಸೀಮಿತವಾಗಿರದೆ ತಮ್ಮಲ್ಲಡಗಿರುವ ಪ್ರತಿಭೆಯನ್ನು ಹೊರ ಹಾಕಲು ಇದೊಂದು ಸೂಕ್ತ ವೇದಿಕೆಯಾಗಿದೆ ಎಂದರು.
ತಾಪಂ ಮಾಜಿ ಸದಸ್ಯ ಅಮೃತ ಯಾದವ ಮಾತನಾಡಿದರು. ಗ್ರಾಮೀಣ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕುಮಾರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಕೇಶವ ಪವಾರ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸಚಿನ್ ಹೊಸೂರ, ಪಿಕೆಪಿಎಸ್ ಅಧ್ಯಕ್ಷ ಮಹಿಬೂಬ ಹತ್ತರಕಿಹಾಳ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರಮೋದ ಮೆಂಚ, ಆನಂದ ಪವಾರ, ಪ್ರಮುಖರಾದ ಬಂದೇನವಾಜ ಡೋಲಚಿ, ಷಣ್ಮುಖ ಪಟ್ಟಣಶೆಟ್ಟಿ, ಶಿವಾನಂದ ಗೋಣಿ, ರಾಘವೇಂದ್ರಸ್ವಾಮಿ ದೇವಾಂಗಮಠ ಇತರರಿದ್ದರು.
ಶಿಕ್ಷಕರಾದ ಎಸ್.ವೈ.ಜಮಖಂಡಿ ಸ್ವಾಗತಿಸಿದರು. ವಿ.ಎಂ.ದಳವಾಯಿ, ಬಿ.ಐ.ಚಿಂಚೋಳಿ ನಿರೂಪಿಸಿದರು. ವಾಲು ಲಮಾಣಿ ವಂದಿಸಿದರು. ಗೊಳಸಂಗಿ ಸಿಆರ್‌ಪಿ ವ್ಯಾಪ್ತಿಯ ಹತ್ತಾರು ಶಾಲೆಗಳ ನೂರಾರು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು.