

Rahul Gandhi: ಗಂಭೀರ ಆರೋಪಗಳ ಮೇಲೆ ಜೈಲು ಶಿಕ್ಷೆ ಅನುಭವಿಸಿ 30 ದಿನಗಳನ್ನು ಪೂರ್ಣಗೊಳಿಸಿದ ಪ್ರಧಾನಿ ಅಥವಾ ಮುಖ್ಯಮಂತ್ರಿಗಳನ್ನು ಪದಚ್ಯುತಗೊಳಿಸಲು ಅವಕಾಶ ನೀಡುವ ಮೂರು ಮಸೂದೆಗಳ ಮಂಡನೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ(ಆಗಸ್ಟ್ 20) ಟೀಕಿಸಿದ್ದಾರೆ.
ಲೋಕಸಭೆಯಲ್ಲಿ ಶಾಸನವನ್ನು ವಿರೋಧಿಸಲು ಸಾಂಕೇತಿಕವಾಗಿ ಕಪ್ಪು ಬಣ್ಣದ ಟೀಶರ್ಟ್ ಧರಿಸಿ ಮಾತನಾಡಿದ ರಾಹುಲ್, ಈ ಮಸೂದೆ ಮತ್ತೆ ನಮ್ಮನ್ನೆಲ್ಲಾ ಮಧ್ಯಕಾಲೀನ ಯುಗಕ್ಕೆ ತೆಗೆದುಕೊಂಡು ಹೋಗುತ್ತಿದೆ ಎಂದರು. ಆಗ ರಾಜನು ತನ್ನ ಇಚ್ಛೆಯಂತೆ ಯಾರನ್ನಾದರೂ ತೆಗೆದುಹಾಕಬಹುದಿತ್ತು, ಅದೇ ರೀತಿ ಈಗ ಚುನಾಯಿತ ವ್ಯಕ್ತಿ ಎಂದರೇನು ಎಂಬುದರ ಪರಿಕಲ್ಪನೆ ಇಲ್ಲದ ರಾಜ, ಅವನಿಗೆ ನಿಮ್ಮ ಮುಖ ಇಷ್ಟವಿಲ್ಲ ಎಂದ ತಕ್ಷಣ ಇಡಿ ಮೂಲಕ ಪ್ರಕರಣ ದಾಖಲಿಸಿ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ವ್ಯಕ್ತಿಯನ್ನು 30 ದಿನಗಳಲ್ಲಿ ಅಳಿಸಿಹಾಕುತ್ತಾನೆ ಎಂದು ಹೇಳಿದರು.
ಇದನ್ನೂ ಓದಿ:ಕಂಚಿಕಟ್ಟೆ ಮಳಿ ಅರಮನೆ ಕಾಂಕ್ರೀಟ್ ರಸ್ತೆ ಉದ್ಘಾಟನೆ
ಮಂಡನೆಯಾಗಿರುವ ಭ್ರಷ್ಟಾಚಾರ ವಿರೋಧಿ ಕರಡು ಕಾನೂನುಗಳ ಪ್ರಕಾರ, ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ಹೊಂದಿರುವ ಆರೋಪದ ಮೇಲೆ ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವರನ್ನು ಬಂಧಿಸಿ ಸತತ 30 ದಿನಗಳ ಕಾಲ ಬಂಧನದಲ್ಲಿರಿಸಿದರೆ, ಅವರನ್ನು 31 ನೇ ದಿನದಂದು ಸ್ವಯಂಚಾಲಿತವಾಗಿ ಅಧಿಕಾರದಿಂದ ತೆಗೆದುಹಾಕಲಾಗುತ್ತದೆ. ಬಂಧನದಿಂದ ಬಿಡುಗಡೆಯಾದ ನಂತರ ಅವರನ್ನು ಮತ್ತೆ ನೇಮಕ ಮಾಡಬಹುದು ಎಂದು ಮಸೂದೆಗಳು ಹೇಳುತ್ತವೆ.(ಏಜೆನ್ಸೀಸ್)