ಬೆಂಕಿ ಹತ್ತಿಕೊಂಡಿದ್ದ ಮರದ ಗೋಡೌನ್​ನಲ್ಲಿ ಮಲಗಿದ್ದ ಇಬ್ಬರು ಕಾರ್ಮಿಕರು ಜಸ್ಟ್​ ಮಿಸ್​!

fire
Published on

ಕೊಡಗು: ಮಡಿಕೇರಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ನಡೆದ ಅಗ್ನಿ ಅವಘಡ ಆಗಿದ್ದು ಪ್ರಶಾಂತ್ ಫರ್ನೀಚರ್ ಗೋಡೌನ್​ಗೆ ಬೆಂಕಿ ಹತ್ತಿತ್ತು.

ಮುಂಜಾನೆ ಎರಡು ಗಂಟೆಗೆ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳ ಬೆಂಕಿ ನಂದಿಸಲು ಹರಸಹಾಸ ಪಡುತ್ತಿದ್ದಾರೆ. ಈವರೆಗೂ ಅಗ್ನಿಯ ಕೆನ್ನಾಲಿಗೆ ನಿಯಂತ್ರಣಕ್ಕೆ ಬಂದಿಲ್ಲ. ಬೆಂಕಿಗೆ ಲಕ್ಷಾಂತರ ಮೌಲ್ಯದ ಮರ, ಪೀಠೋಪಕರಣಗಳು ಆಹುತಿಯಾಗಿವೆ. ಸ್ಥಳಕ್ಕೆ ಮಡಿಕೇರಿ‌ ನಗರ ಪೊಲೀಸರ ಭೇಟಿ. ನೀಡಿದ್ದಾರೆ.

ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ನಡೆದಿದ್ದು ಈ ಸಂದರ್ಭ ಇಬ್ಬರ ಅಗ್ನಿಶಾಮಕದಳ ಅಧಿಕಾರಿಗಳು ಪ್ರಾಣ ರಕ್ಷಣೆ ಮಾಡಿದ್ದು ಮರದ ಗೋಡೌನ್ ನಲ್ಲಿ‌ ಮಲಗಿದ್ದ ಇಬ್ಬರು ಕೆಲಸಗಾರರು ಉಸಿರು ಬಿಗಿ ಹಿಡಿದು ನಿಂತಿದ್ದರು.

ಭಾರೀ ಅನಾಹುತ ವೊಂದು ಸ್ವಲ್ಪದರಲ್ಲಿ ತಪ್ಪಿದ್ದು ಪ್ರಶಾಂತ್ ಫರ್ನೀಚರ್ ಗೋಡೌನ್ ಮಾತ್ರ ಹೊತ್ತಿ ಉರಿದಿದೆ. ಅಗ್ನಿಶಾಕದಳದವರು ಅಕ್ಕಪಕ್ಕದ ಕಟ್ಟಡಕ್ಕೆ ಹರಡದಂತೆ ಮುನ್ನೆಚ್ಚರಿಕೆ ವಹಿಸಿದ್ದು ಬೆಂಕಿ ನಂದಿಸುವ ಕಾರ್ಯಕ್ರಮ ಇನ್ನೂ ನಡೆಯುತ್ತಿದ್ದು ಸ್ಥಳಕ್ಕೆ ಮಡಿಕೇರಿ‌ ನಗರ ಪೊಲೀಸರ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net