ಕರ್ನೂಲ್: ಕೆಲವೊಮ್ಮೆ ಮೂಢ ನಂಬಿಕೆಯೇ ವಂಚಕರ ಬಂಡವಾಳವಾಗಿರುತ್ತದೆ. ಅದರಲ್ಲೂ ವ್ಯಕ್ತಿಯ ದುರ್ಬಲತೆಯನ್ನು ದುರ್ಬಳಕೆ ಮಾಡಿಕೊಂಡು ಮೋಸ ಮಾಡುವವರಿಗೇನು ಕಡಿಮೆ ಇಲ್ಲ. ಇಂಥದ್ದೇ ಒಂದು ಘಟನೆ ಪಕ್ಕದ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಇವು ಲಕ್ಷಾಂತರ ಹಾಗೂ ಕೋಟ್ಯಾಂತರ ರೂಪಾಯಿಗೆ ಬೆಲೆ ಬಾಳುತ್ತದೆ ಎಂದು ಹೇಳಿ ಕುಂಬಳ ಜಾತಿಯ ಸೋರೆಕಾಯಿಯನ್ನು ಕೇವಲ 10.20 ರೂ.ಗೆ ಮಾರಾಟ ಮಾಡುತ್ತಿದ್ದ 21 ಮಂದಿಯನ್ನು ಆಂಧ್ರ ಪೊಲೀಸರು ಬಂಧಿಸಿದ್ದಾರೆ. ಎಲ್ಲ ಆರೋಪಿಗಳು ಆಶ್ರಮವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ರೀತಿಯ ಸೋರೆಕಾಯಿ ತುಂಬಾ ವಿರಳ, ಇದನ್ನು ಮನೆಯಲ್ಲಿ ಇಟ್ಟುಕೊಂಡರೆ ಶ್ರೀಮಂತರಾಗುತ್ತೀರಿ ಎಂದು ನಂಬಿಸಿ ವಂಚಿಸುತ್ತಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.
ಈ ಬಗ್ಗೆ ಸ್ವತಃ ಬಾಯ್ಬಿಟ್ಟಿರುವ ಆರೋಪಿಗಳು, ನಾಗಸ್ವರ (ಪುಂಗಿ) ಮಾದರಿಯ ಸೋರೆಕಾಯಿ ತುಂಬಾ ವಿಶೇಷವಾದದ್ದು. ಇವು ಶ್ರೀಶೈಲಂ ಮಲ್ಲಿಕಾರ್ಜುನ ಪತ್ತೆಯಾದ ನಲ್ಲಮಲ್ಲ ಅರಣ್ಯದ ಕೆಲವೇ ಏರಿಯಾಗಳಲ್ಲಿ ಬೆಳೆಯಕಾಗುತ್ತದೆ ಎಂದು ಜನರನ್ನು ನಂಬಿಸುತ್ತಿದ್ದರಂತೆ. ಅವುಗಳನ್ನು ಕೆಲವೊಮ್ಮೆ ಲಕ್ಷ ಮತ್ತು ಕೋಟಿ ರೂ.ಗಳಿಗೂ ಮಾರಾಟ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ರಾತ್ರಿ ಗಾಢ ನಿದ್ರೆಯಲ್ಲಿದ್ದ ಗರ್ಭಿಣಿ, 3 ವರ್ಷದ ಮಗ ಬೆಳಗಾಗುವಷ್ಟರಲ್ಲಿ ದಾರುಣ ಸಾವು..!
ಅಂದಹಾಗೆ ನಾಗಸ್ವರ ಮಾದರಿಯ ಸೋರೆಕಾಯಿಯನ್ನು ಒಣಗಿಸಿ ನಾಗಸ್ವರ ಮಾಡಲು ಮಾತ್ರ ಬಳಸುತ್ತಾರೆ. ಇದು ತುಂಬಾ ಕಹಿಯಾಗಿರುವುದರಿಂದ ಸಾಂಬರು ಮಾಡುವುದಿಲ್ಲ. ಇಂತಹ ನಾಗಸ್ವರ ಕಾಯಿಗಳು ಎಲ್ಲೆಡೆ ಬೆಳೆಯಲು ಆಗುವುದಿಲ್ಲ. ಇದಕ್ಕೆ ತನ್ನದೇಯಾದ ವಿಶೇಷತೆ ಇದೆ. ಇದರಲ್ಲಿ ತುಂಬಾ ದೈವ ಶಕ್ತಿಯಿದೆ. ಮನೆಯಲ್ಲಿ ಇದನ್ನು ಯಾರು ಇಟ್ಟುಕೊಳ್ಳುತ್ತಾರೋ ಅವರ ಮೇಲೆ ದೇವರು ಕರುಣೆ ತೋರಿಸಿ, ಕುಬೇರರನ್ನಾಗಿ ಮಾಡುತ್ತಾನೆಂದು ಆರೋಪಿಗಳು ಜನರನ್ನು ನಂಬಿಸಿ ಯಾಮಾರಿಸುತ್ತಿದ್ದರು.
ಸದ್ಯ 21 ಆರೋಪಿಗಳನ್ನು ಬಂಧಿಸಲಾಗಿದ್ದು, ಎಲ್ಲರೂ ತೆಲಂಗಾಣದ ವಿವಿಧ ಭಾಗದವರು. ಶ್ರೀಶೈಲಂ ಅನ್ನಪೂರ್ಣ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದರು. ಈ ಗ್ಯಾಂಗಿನ ಪ್ರಮುಖ ರುವಾರಿ ಅರವಿಂದ್ ರೆಡ್ಡಿ ಎಂದು ಗುರುತಿಸಲಾಗಿದೆ. ಬಂಧಿತರಿಂದ ಹಣವನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)
ಶತ್ರು ರಾಷ್ಟ್ರಗಳ ದಾಳಿ ತಡೆಗೆ ಗಡಿಯಲ್ಲಿ ಲೋಕಾರ್ಪಣೆಗೊಂಡಿತು 44 ಸೇತುವೆ