

ಬೆಂಗಳೂರು: ಗ್ಲೋಬಲ್ ಗಾರ್ನರ್ ಸಂಸ್ಥೆ ಮತ್ತು ವಿಜಯವಾಣಿ, ಮತ್ತು ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಶನಿವಾರ ಹಾಗೂ ಭಾನುವಾರ (ಡಿ.17 ಮತ್ತು 18) ‘ಗ್ಲೋಬಲ್ ಗಾರ್ನರ್ ಎಕ್ಸ್ಪೋ’ ನಡೆಯಲಿದೆ.
ಗ್ರಾಹಕರು ಮತ್ತು ಉತ್ಪಾದಕರು ಇಬ್ಬರಿಗೂ ಸಹಾಯವಾಗುವ ರೀತಿಯಲ್ಲಿ ಮೇಳವನ್ನು ಆಯೋಜಿಸಲಾಗಿದೆ. ಹೊಸದಾಗಿ ಬಿಜಿನೆಸ್ ಆರಂಭಿಸುವವರಿಗೆ ಮಾಹಿತಿ ನೀಡಲಾಗುತ್ತದೆ. ಹೊಸದಾಗಿ ಉತ್ಪನ್ನಗಳನ್ನು ತಯಾರಿಸುವ ವರಿಗೆ ಮಾರುಕಟ್ಟೆ ಕಲ್ಪಿಸಲು ಬೇಕಾದ ಸಿದ್ಧತೆಗಳನ್ನು ಮೇಳದಲ್ಲಿ ತಿಳಿಸಿಕೊಡಲಾಗುತ್ತದೆ.
ಗ್ಲೋಬಲ್ ಗಾರ್ನರ್ ಸಂಸ್ಥೆ ಕರ್ನಾಟಕ ಮತ್ತು ಗೋವಾ ಮಾರುಕಟ್ಟೆ ಮುಖ್ಯಸ್ಥ ದೇವರಾಜ್, ಇದೊಂದು ಬಹು ಆಯಾಮದ ಮೇಳ ವಾಗಿದೆ. ಇಲ್ಲಿ ವಿದ್ಯಾ ರ್ಥಿಗಳು, ಮಹಿಳೆ ಯರು, ವ್ಯಾಪಾರಿಗಳು, ಗ್ರಾಹಕರು, ಉತ್ಪಾದಕರು, ನವೋದ್ಯಮ ಆರಂಭಿಸಲು ಚಿಂತನೆ ನಡೆಸುತ್ತಿರುವವರು, ಹೊಸದಾಗಿ ಬಿಜಿನೆಸ್ ಆರಂಭಿಸಲು ನೆರವು ಬಯಸುತ್ತಿರುವವರು- ಹೀಗೆ ಸೇರಿ ವರ್ಗದ ಜನರಿಗೆ ಗ್ಲೋಬಲ್ ಗಾರ್ನರ್ ಮೇಳವು ಸಹಾಯವಾಗಲಿದೆ ಎಂದು ವಿವರಿಸಿದರು.
ಹೊಸದಾಗಿ ಉತ್ಪನ್ನಗಳನ್ನು ತಯಾರಿಸಿ ಮಾರ್ಕೆಟ್ ಮಾಡುವುದು ಹೇಗೆಂದು ತಿಳಿಯ ದಿದ್ದರೆ, ಮೇಳದಲ್ಲಿ ವೇದಿಕೆ ಕಲ್ಪಿಸಲಾಗುತ್ತದೆ. ಈಗಾಗಲೇ ಮಾರುಕಟ್ಟೆ ಮಾಡುತಿರುವವರಿಗೆ ವಿಸ್ತರಣೆಗೆ ಕೌಶಲದ ಬಗ್ಗೆ ತಿಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಗ್ಲೋಬಲ್ ಗಾರ್ನರ್ ಸಂಸ್ಥೆಯಲ್ಲಿ 20 ಕೋಟಿಗೂ ಹೆಚ್ಚಿನ ವಸ್ತುಗಳಿದ್ದು, ಸುಲಭವಾಗಿ ಆನ್ಲೈನ್, ಆಫ್ಲೈನ್ನಲ್ಲಿ ಖರೀದಿಸಬಹುದಾಗಿದೆ.
ಗ್ಲೋಬಲ್ ಗಾರ್ನರ್ ಎಕ್ಸ್ಪೋ’ ಬಹು ಆಯಾಮದ ಮೇಳವಾಗಿದೆ. ಗ್ರಾಹಕರು, ಉತ್ಪಾದಕರು, ವ್ಯಾಪಾರಿಗಳು ಹಾಗೂ ಹೊಸದಾಗಿ ಬಿಜಿನೆಸ್ ಶುರು ಮಾಡಲು ಚಿಂತನೆ ನಡೆಸುತ್ತಿರುವವರಿಗೆ ವೇದಿಕೆಯಾಗಿದೆ. ಪ್ರತಿಯೊಬ್ಬರೂ ಈ ವೇದಿಕೆಯನ್ನ ಬಳಸಿಕೊಳ್ಳಬೇಕು. | ದೇವರಾಜ್ ಗ್ಲೋಬಲ್ ಗಾರ್ನರ್ ಸಂಸ್ಥೆ, ಕರ್ನಾಟಕ-ಗೋವಾ ಮಾರುಕಟ್ಟೆ ಮುಖ್ಯಸ್ಥ