ಭಾರತದಲ್ಲಿ 24 ಗಂಟೆಯಲ್ಲಿ 106 ಕರೊನಾ ವೈರಸ್ ಪ್ರಕರಣಗಳು ಪತ್ತೆ; ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ

Coronavirus 30 March 20
Published on

ನವದೆಹಲಿ: ಕರೊನಾ ವೈರಸ್​ ಭಾರತದಲ್ಲಿ ಸಾವಿರದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 106 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1024ಕ್ಕೆ ಏರಿದೆ. ಮೃತಪಟ್ಟವರು 27 ಮಂದಿ.

ಲಾಕ್​ಡೌನ್​ ಆಗಿದ್ದರೂ ಜನರ ಓಡಾಟವೂ ನಿಂತಿಲ್ಲ. ಕರೊನಾ ಹರಡುವಿಕೆಯ ಪ್ರಮಾಣವೂ ಕಡಿಮೆ ಆಗುತ್ತಿಲ್ಲ. ಹಾಗಾಗಿ ಭಾನುವಾರ ಮತ್ತೊಮ್ಮೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಜನರು ಲಾಕ್​ಡೌನ್​ ಪಾಲಿಸುವಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಿ, ಎಲ್ಲ ಗಡಿಭಾಗಗಳನ್ನೂ ಬಂದ್​ ಮಾಡಿ ಎಂದು ಹೇಳಿದೆ.

ಜಗತ್ತಿನಾದ್ಯಂತ ಕರೊನಾ ವೈರಸ್​ ಸೋಂಕಿತರ ಸಂಖ್ಯೆ 7,22,000ಕ್ಕಿಂತಲೂ ಹೆಚ್ಚಾಗಿದ್ದು, 33,960 ಮಂದಿ ಮೃತಪಟ್ಟಿದ್ದಾರೆ. ಇದ್ದುದರಲ್ಲೇ ಸಮಾಧಾನಕೊಡುವ ಸಂಗತಿಯೆಂದರೆ 1,51,000 ಜನ ವೈರಸ್​ನಿಂದ ಸಂಪೂರ್ಣ ಮುಕ್ತ ಪಡೆದು, ಗುಣಮುಖರಾಗಿದ್ದಾರೆ.

ಭಾರತದಲ್ಲೂ ಕೂಡ 87 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆದರೆ ಲಾಕ್​ಡೌನ್​ ನಡುವೆಯೂ ವಲಸೆ ಕಾರ್ಮಿಕರು ದಂಡುದಂಡಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುತ್ತಿರುವುದು ಸದ್ಯದ ಆತಂಕ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net