ಹೆಬ್ರಿ: ಕ್ರೀಡೆ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಮುದಾಯದವರು ಮುಂದೆ ಬರಬೇಕು. ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸ್ವಯಂ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬೇಳಂಜೆ ಶಾಖೆ ವತಿಯಿಂದ ಭಾನುವಾರ ಸುಭಾಷ್ ನಗರ ಬೇಳಂಜೆಯಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪುರುಷ ಮತ್ತು ಮಹಿಳೆಯರ ಕಬ್ಬಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರಾದ ಮಹೇಶ್ ಶೆಟ್ಟಿ ಬಾದ್ಲು, ಅಮೃತ್ ಕುಮಾರ್ ಶೆಟ್ಟಿ, ವಿಘ್ನೇಶ್, ರಾಜೇಶ್ ಅವರನ್ನು ಸನ್ಮಾನಿಸಲಾಯಿತು.
ಉದಯ ಕೃಷ್ಣ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉದಯ್‌ಕುಮಾರ್ ಶೆಟ್ಟಿ, ಉದ್ಯಮಿ ಪ್ರವೀಣ್ ಬಲ್ಲಾಳ್, ಗುತ್ತಿಗೆದಾರರಾದ ಭೋಜು ಕುಲಾಲ್, ಸನತ್ ಕುಮಾರ್ ಶೆಟ್ಟಿ, ಕುಚ್ಚೂರು ಗ್ರಾಪಂ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬಾದ್ಲು, ಪ್ರಮುಖರಾದ ಅಮೃತ್ ಕುಮಾರ್ ಶೆಟ್ಟಿ, ಉದಯ ಪೂಜಾರಿ ಕಲ್ಮನೆ, ಪ್ರಮುಖರಾದ ಶಾಮರಾಜ್ ಬಿರ್ತಿ, ದೇವು ಕನ್ಯಾನ, ನಾರಾಯಣ ಶಿವಪುರ, ಸಂತೋಷ ಮುದ್ರಾಡಿ, ನಾರಾಯಣ ಬೇಳಂಜೆ, ರಾಮ ಬೇಳಂಜೆ, ಗೋಪಾಲ, ರಮೇಶ್, ಶ್ಯಾಮ, ವಿಗ್ನೇಶ್, ಶಂಕರ, ಅಪ್ಪು, ಗಣೇಶ್, ಅಣ್ಣಪ್ಪ, ಪ್ರಮೋದ್ ಉಪಸ್ಥಿತರಿದ್ದರು. ಜಯರಾಮ್ ಮುದ್ರಾಡಿ ಕಾರ್ಯಕ್ರಮ ನಿರೂಪಿಸಿದರು. ವಾಸು ಹೆಬ್ರಿ ವಂದಿಸಿದರು.