ಶಿರೋಳ: ಸದೃಢ-ಸಶಕ್ತ ಭಾರತದ ನಿರ್ವಣಕ್ಕೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಹಾಗೂ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಪಕ್ಷ ಸಂಘಟನೆಗೆ ಮಹತ್ವ ನೀಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಕಾರ್ಯಕರ್ತರಿಗೆ ಹೇಳಿದರು.
ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಕಾರ್ಯಕರ್ತರು ಪ್ರತಿ ಮನೆಗೆ ಹೋಗಿ ಬಿಜೆಪಿ ಸರ್ಕಾರದ ಸಾಧನೆ ಹೇಳಿ ಪಕ್ಷದ ಸದಸ್ಯತ್ವವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು. ಬಿಜಿಪಿ ಮುಖಂಡ ನಾಗನಗೌಡ ತಿಮ್ಮನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ನರಗುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ನಿಂಗಣ್ಣ ಗಾಡಿ,ನಿವೃತ್ತ ಶಿಕ್ಷಕ ವಿ.ಕೆ. ಮರಿಗುದ್ದಿ, ಶಿವಕುಮಾರ ನೀಲಗುಂದ, ಅಶೋಕ ಹೆಬ್ಬಳ್ಳಿ, ಬಸವರಾಜ ಕರಕಿಕಟ್ಟಿ, ಮಹಾಬಳೇಶ್ವರ ಕೊಡಬಳ್ಳಿ, ಲಾಲ್ಸಾಬ್ ಅರಗಂಜಿ, ಗುರುಬಸಯ್ಯ ನಾಗಲೋಟಿಮಠ, ಹನುಮಂತ ಕಾಡಪ್ಪನವರ, ಶಿವಾನಂದ ಯಲಬಳ್ಳಿ, ಡಾ.ವಿ.ಎಸ್. ಚವಡಿ, ಸುರೇಶ ಗುರಮ್ಮನವರ, ಕೇದಾರಗೌಡ ಮನ್ನೂರ, ಉಮೇಶ ಬೆಳವಣಿಕಿ, ಶಿವಾನಂದ ಯಲಬಳ್ಳಿ, ಬಸವರಾಜ ಗಡೇಕಾರ,ಪ್ರವೀಣ ಶೆಲ್ಲಿಕೇರಿ, ದ್ಯಾಮಣ್ಣ ಶಾಂತಗೇರಿ, ರವಿ ದೊತ್ರದ, ಸತೀಶ ಕುಬಸದ, ಗ್ಯಾನೇಶ ಪಾರಗೆ, ಪರುತಪ್ಪ ಜಂಗಿನ, ಮೈಲಾರಪ್ಪ ಹಿರೇಮನಿ, ಇತರರಿದ್ದರು.