ಉಪ್ಪಾರ ಮಠಕ್ಕೆ ಕೊಡಿ 500 ಎಕರೆ ಜಮೀನು, 12 ಕೋಟಿ ದುಡ್ಡು

BAGIRATHA SWAMIJI (UPPAR)
Published on

ಹೊಸದುರ್ಗ: ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ, ಸಮುದಾಯ ಮೂವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಒತ್ತಾಯಿಸಿದರು.

ತಾಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಭಗೀರಥ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಭಗೀರಥ ಮಠದ ಆವರಣದಲ್ಲಿ 60 ಅಡಿ ಎತ್ತರದ ಭಗೀರಥ ಮಹರ್ಷಿಯ ಏಕಶಿಲಾ ಮೂರ್ತಿಯ ನಿರ್ಮಾಣಕ್ಕೆ 12 ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.

ಭಗೀರಥ ಗುರುಪೀಠವಿರುವ 500 ಎಕರೆ ವಿಸ್ತೀರ್ಣದ ಜಾಗವನ್ನು 1960ರಲ್ಲಿ ಸಮಾಜದ 12ನೇ ಜಗದ್ಗುರು ಲೇಪಾಕ್ಷಿ ಶ್ರೀಗಳು ಎಸ್.ನಿಜಲಿಂಗಪ್ಪ ಅವರ ಸರ್ಕಾರದಿಂದ 45 ವರ್ಷಗಳ ಗುತ್ತಿಗೆ ಆಧಾರದಲ್ಲಿ ಪಡೆದಿದ್ದರು. ಈ ಗುತ್ತಿಗೆ ಪದ್ಧತಿ ರದ್ದು ಮಾಡಿ ಶಾಶ್ವತವಾಗಿ ಮಠದ ಸುಪರ್ದಿಗೆ ಜಾಗವನ್ನು ಒಪ್ಪಿಸಬೇಕು ಎಂದು ಮನವಿ ಮಾಡಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕರಾದ ಬಿ.ಜಿ.ಗೋವಿಂದಪ್ಪ, ಪುಟ್ಟೇಗೌಡ, ಕೆ.ಆರ್.ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net