

girlfriend : ತನ್ನ ಗೆಳತಿ ಫೋನ್ ಸ್ವೀಕರಿಸದಿದ್ದಾಗ ಕೋಪಗೊಂಡ ಯುವಕನೊಬ್ಬ ಆಕೆಯ ಗ್ರಾಮಕ್ಕೆ ಹೋಗುತ್ತಿದ್ದ ವಿದ್ಯುತ್ ಸರಬರಾಜು ತಂತಿಗಳನ್ನು ಕತ್ತರಿಸಿ ಹಾಕಿದ್ದಾನೆ. ಇದರಿಂದಾಗಿ ಇಡೀ ಗ್ರಾಮ ಕತ್ತಲೆಯಲ್ಲಿ ಮುಳುಗಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?:
ಯುವಕನೊಬ್ಬ ವಿದ್ಯುತ್ ಕಂಬವನ್ನು ಹತ್ತಿ ದೊಡ್ಡ ಕಟಿಂಗ್ ಇಕ್ಕಳದಿಂದ ತಂತಿಗಳನ್ನು ಕತ್ತರಿಸುತ್ತಿರುವುದು ಕಂಡುಬರುತ್ತದೆ. ಇದರಿಂದ ಗ್ರಾಮದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಈಗ ವೀಡಿಯೊ ವೈರಲ್ ಆಗುತ್ತಿದ್ದಂತೆ ಕೆಲವರು ಈ ಹುಡುಗನ ಗೆಳತಿಯ ಫೋನ್ ಕಾರ್ಯನಿರತವಾಗಿದ್ದರಿಂದ ಅಥವಾ ಈತನ ಫೋನ್ ಕರೆ ಸ್ವೀಕರೆಸದೆ ಇರುವುದರಿಂದ ಅವನು ಇಡೀ ಗ್ರಾಮದ ವಿದ್ಯುತ್ ಕಡಿತಗೊಳಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿಯನ್ನು ದೃಢೀಕರಿಸಲು ಸಾಧ್ಯವಾಗಿಲ್ಲ ಆದರೆ ವೀಡಿಯೊ ವೈರಲ್ ಆಗುತ್ತಿದೆ.
ಯುವಕ ತನ್ನ ಗೆಳತಿ ಫೋನ್ ಎತ್ತದ ಕಾರಣ ಹಾಗೆ ಮಾಡಿರಬೇಕ. ವಿದ್ಯುತ್ ಇಲ್ಲದಿದ್ದಾಗ ಅವಳು ಟಿವಿ ಆಫ್ ಮಾಡುತ್ತಾಳೆ. ನಂತರ ಅವಳು ಅವನೊಂದಿಗೆ ಮಾತನಾಡುತ್ತಾಳೆಂದು ಹೀಗೆ ಮಾಡಿರಬೇಕು ಎಂದು ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಘಟನೆ ನಡೆದಿರುವುದು ಎಲ್ಲಿ ಹಾಗೂ ಈತ ಇಡೀ ಗ್ರಾಮದ ಕರೆಂಟ್ ಕಟ್ ಮಾಡಲು ಅಸಲಿ ಕಾರಣವೇನು ಎನ್ನುವ ಯಾವುದೇ ಖಚಿತ ಮಾಹಿತಿ ಇಲ್ಲ.
ನೀವು ಈಗಷ್ಟೇ ನೋಡಿದ ವೀಡಿಯೊವನ್ನು @gharkekalesh ಎಂಬ ಖಾತೆಯಿಂದ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅದರ ಶೀರ್ಷಿಕೆ ಹೀಗಿದೆ, 'ಗೆಳತಿಯ ಫೋನ್ ಬ್ಯುಸಿಯಾಗಿದ್ದಾಗ, ಯುವಕ ಇಡೀ ಹಳ್ಳಿಯ ವಿದ್ಯುತ್ ಕಡಿತಗೊಳಿಸಿದನು.' ಸುದ್ದಿ ಬರೆಯುವವರೆಗೆ, 1 ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ನೋಡಿದ್ದಾರೆ.
ಗಮನಿಸಿ: ಈ ಸುದ್ದಿಯಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಆಧರಿಸಿದೆ.