More

    ಹೇರ್ ಸ್ಟ್ರೈಟ್‌ನರ್‌ ಇಲ್ಲದೆ ಇಸ್ತ್ರಿ ಪೆಟ್ಟಿಗೆಯಿಂದ ತಲೆ ಕೂದಲು ನೇರ ಮಾಡಿದಳು; ಯಾಕಮ್ಮ ಹೀಗೆ ಆಡ್ತೀರಾ? ಎಂದ್ರು ನೆಟ್ಟಿಗರು

    ನವದೆಹಲಿ: ಪ್ರತಿದಿನ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ಅದು ಜನರನ್ನು ಆಶ್ಚರ್ಯಗೊಳಿಸುತ್ತದೆ. ಇದೀಗ ಅಂತಹ ವಿಡಿಯೋವೊಂದು ವೈರಲ್ ಆಗುತ್ತಿದೆ.

    ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು ಕುಕ್ಕರ್‌ನಿಂದ ಬಟ್ಟೆ ಇಸ್ತ್ರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದಾದ ಬಳಿಕ ಮಹಿಳೆಯೊಬ್ಬರು ಗ್ಯಾಸ್ ಉಳಿಸಲು ಅದ್ಭುತ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ಈ ವೀಡಿಯೊಗಳು ಇನ್ನೂ ಹಳೆಯದಾಗಿರಲಿಲ್ಲ, ಈಗ ಇನ್ನೊಬ್ಬ ಹುಡುಗಿಯ ವೀಡಿಯೊ ವೈರಲ್ ಆಗುತ್ತಿದೆ.

    ನೀವು ಯಾವುದೇ ಫಂಕ್ಷನ್‌ಗೆ ಹೋಗಬೇಕಾದಾಗ, ನಿಮ್ಮ ಮನೆಯ ಮಹಿಳೆಯರು ಖಂಡಿತವಾಗಿಯೂ ಹೇರ್ ಸ್ಟ್ರೈಟ್‌ನರ್‌ನಿಂದ ಕೂದಲನ್ನು ನೇರಗೊಳಿಸುವುದನ್ನು ನೀವು ಗಮನಿಸಿರಬೇಕು. ಆದರೆ ಮಹಿಳೆ ತನ್ನ ಕೂದಲನ್ನು ಇಸ್ತ್ರಿ ಪೆಟ್ಟಿಗೆಯಿಂದ ನೇರಗೊಳಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ?

    ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಮಹಿಳೆಯೊಬ್ಬರು ಇಸ್ತ್ರಿ ಪೆಟ್ಟಿಗೆ ಸಹಾಯದಿಂದ ಕೂದಲನ್ನು ನೇರಗೊಳಿಸುವುದರಲ್ಲಿ ನಿರತರಾಗಿದ್ದಾರೆ. ಕೂದಲಿನ ಒಂದು ಬದಿಯಲ್ಲಿ ಇಸ್ತ್ರಿ ಪೆಟ್ಟಿಗೆ ಮತ್ತು ಇನ್ನೊಂದು ಬದಿಯಲ್ಲಿ ಅವಳ ಕೈಗಳು ಸುಡದಂತೆ ದಪ್ಪ ಬಟ್ಟೆ ಇದೆ. ಮತ್ತು ಈ ರೀತಿಯಾಗಿ ಹುಡುಗಿ ತನ್ನ ಕೂದಲನ್ನು ಇಸ್ತ್ರಿ ಪೆಟ್ಟಿಗೆ ಮತ್ತು ಬಟ್ಟೆಯ ನಡುವೆ ಇರಿಸುವ ಮೂಲಕ ನೇರಗೊಳಿಸುತ್ತಿದ್ದಾಳೆ. ಯಾವುದೇ ಪಾರ್ಲರ್​​ ಹೋಗದೆ ಯುವತಿ ಕೂದಲು ನೇರವಾಗಿದೆ.

    View this post on Instagram

    A post shared by Isha Yadav (@ishayadav__)

    ಈ ವೀಡಿಯೊವನ್ನು ಇನ್​ಸ್ಟಾಗ್ರಾಮ್​ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿದೆ. ಸುದ್ದಿ ಬರೆಯುವವರೆಗೂ ವಿಡಿಯೋವನ್ನು 11 ಲಕ್ಷ 81 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ವೀಡಿಯೊವನ್ನು ನೋಡಿದ ನೆಟ್ಟಿಗರು, ಇದು ಅಪಾಯಕಾರಿಯಾಗಿದೆ, ನನ್ನ ಚಿಕ್ಕಮ್ಮ 30 ವರ್ಷಗಳ ಹಿಂದೆ ಈ ತಂತ್ರವನ್ನು ಮಾಡಿದ್ದರು. ಕೂದಲು ಹಾಳಾಗುತ್ತದೆ ಎಂದು ಕಾಮೆಂಟ್​​ ಮಾಡಿದ್ದಾರೆ.

    ಗಮನಿಸಿ: ಇದು ಅಪಯಕಾರಿಯಾಗಿದೆ. ನೀವು ಇದನ್ನು ಮನೆಯಲ್ಲಿ ಪ್ರಯೋಗ ಮಾಡದೆ ಇರುವುದು ಉತ್ತಮ. ನಿಮಗೆ ನೇರವಾದ ಕೂದಲಿನ ಅಗತ್ಯ ಇದ್ದಲ್ಲಿ ನುರಿತ ಪರಿಣಿತರ ಸಹಾಯ ಪಡೆದುಕೊಳ್ಳುವುದು ಉತ್ತಮ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts