

ಅಜಮ್ಗಢ (ಉತ್ತರ ಪ್ರದೇಶ): ಗ್ರಾಮದ ಹೊರವಲಯದ ಕೊಳವೊಂದರಲ್ಲಿ ಹದಿನಾರು ವರ್ಷದ ಬಾಲಕಿಯೋರ್ವಳ ಶವ ಸೋಮವಾರ ದೊರೆತಿದ್ದು, ಹಲವು ಸಂಶಯಗಳನ್ನು ಹುಟ್ಟುಹಾಕಿದೆ.
ಬಾಲಕಿಯ ಮೇಲೆ ಅತ್ಯಾಚಾರ ನಡೆದಿರಬಹುದು ಎಂದು ಶಂಕಿಸಲಾಗಿದೆ. ಆಕೆಯ ಒಟ್ಟಾರೆ ಕುಟುಂಬ ಲಾಕ್ ಡೌನ್ ಅವಧಿಯಲ್ಲಿ ಮುಂಬೈನಿಂದ ಹಿಂದಿರುಗಿದ್ದು, ಆಕೆ ಶನಿವಾರದಿಂದ ಕಾಣೆಯಾಗಿದ್ದಾಳೆ.
ವಿಚಾರಣೆಗಾಗಿ ಯುವಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಶೀಘ್ರದಲ್ಲೇ ಪ್ರಕರಣ ಬಗೆಹರಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಪಂಕಜ್ ಪಾಂಡೆ ತಿಳಿಸಿದ್ದಾರೆ.
ಯುವತಿ ಶನಿವಾರ ನಾಪತ್ತೆಯಾದ ನಂತರ ದೂರು ದಾಖಲಿಸಲಾಗಿತ್ತು . ಎರಡು ದಿನಗಳ ನಂತರ ಮುಬಾರಕ್ಪುರ ಪೊಲೀಸ್ ಠಾಣೆ ಪ್ರದೇಶದ ಕೊಳದಿಂದ ಆಕೆಯ ಶವ ಪತ್ತೆಯಾಗಿದೆ. ಆಕೆಯ ಕುಟುಂಬದ ಸದಸ್ಯರು ಅತ್ಯಾಚಾರ ಮತ್ತು ಕೊಲೆ ದೂರು ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.