VIDEO| ನಡುರಸ್ತೆಯಲ್ಲೇ ಡೇಂಜರಸ್ ಬೈಕ್ ಸ್ಟಂಟ್ ಮಾಡಿದ ಹುಡುಗಿ..!

bike stunt
ಸಾಂದರ್ಭಿಕ ಚಿತ್ರ
Published on

ಶ್ರೀನಗರ: ಇತ್ತೀಚಿಗೆ ಜನರು ಸಾಮಾನ್ಯವಾಗಿ ಟ್ರಾಫಿಕ್ ಕಾನೂನುಗಳನ್ನು ಉಲ್ಲಂಘಿಸುವುದು ಮತ್ತು ಜೀವಕ್ಕೆ ಅಪಾಯವನ್ನುಂಟುಮಾಡುವ ಸಾಹಸಗಳು ಹೆಚ್ಚಾಗುತ್ತಿದ್ದು, ಬೈಕ್‌ನ್ನು ವಶಕ್ಕೆ ಪಡೆದು ಬಾಲಕಿಗೆ ದಂಡ ವಿಧಿಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ. 

ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವಿಡಿಯೋ ವೈರಲ್ ಆಗಿದ್ದು, 21 ಸೆಕೆಂಡ್‌ಗಳ ವೀಡಿಯೊದಲ್ಲಿ ಹೆಲ್ಮೆಟ್ ಧರಿಸದೆ, ಬೂದು ಬಣ್ಣದ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಹ್ಯಾಂಡಲ್‌ಬಾರ್‌ನಲ್ಲಿ ಕೈ ಹಾಕದೆ ಸವಾರಿ ಮಾಡುತ್ತಿರುವುದನ್ನು ದೃಶ್ಯದಲ್ಲಿ ಸೆರೆಯಾಗಿದೆ. ಹುಡುಗಿಯು ಕ್ಯಾಮೆರಾವನ್ನು ನೋಡುತ್ತಾ ವಿಜಯದ ಚಿಹ್ನೆಯನ್ನು ತೋರಿಸುವುದನ್ನು ಸಹ ಕಾಣಬಹುದಾಗಿದೆ.


ಕೂಡಲೇ ಎಚ್ಚೆತ್ತ ಶ್ರೀನಗರ ಸಂಚಾರ ಪೊಲೀಸರು ಬೈಕ್ ವಶಪಡಿಸಿಕೊಂಡು ಕೌನ್ಸೆಲಿಂಗ್ ಮಾಡಿದ್ದು, ಬಾಲಕಿಗೆ ದಂಡ ವಿಧಿಸಿದ್ದಾರೆ. ಕಾನೂನುನನ್ನು ಉಲ್ಲಂಘಿಸಿದ್ದಕ್ಕಾಗಿ ಮೋಟಾರ್​​ ವಾಹನ ಕಾಯಿದೆಯಡಿ ಕ್ರಮ ತೆಗೆದುಕೊಳ್ಳಲಾಗಿದ್ದು, ಇಂತಹ ಕೃತ್ಯಗಳನ್ನು ಪುನರಾವರ್ತಿಸದಂತೆ ಸಲಹೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net