ಚಿಕನ್ ಫ್ರೈಡ್ ರೈಸ್ ತಿಂದ ಬಾಲಕಿ ಸಾವು! ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವ...chicken fried rice

chicken fried rice
Published on

chicken fried rice : ಹುಟ್ಟುಹಬ್ಬದಂದು ಚಿಕನ್ ಫ್ರೈಡ್ ರೈಸ್ ತಿಂದು  ಬಾಲಕಿಯೊಬ್ಬಳು ಸಾವನ್ನೊಪ್ಪಿದ್ದಾಳೆ| ಈ ಘಟನೆ ಚೆನ್ನೈನಲ್ಲಿ  ನಡೆದಿದೆ.

ಸಂಜನಾ  ಮೃತ ಬಾಲಕಿಯಾಗಿದ್ದಾಳೆ. ಈಕೆ ತನ್ನ ಹುಟ್ಟುಹಬ್ಬದಂದು ಬೀಚ್‌ನಲ್ಲಿ ಚಿಕನ್ ಫ್ರೈಡ್ ರೈಸ್ ತಿಂದ ನಂತರ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾಳೆ. ಈ ಘಟನೆಯು ಫಾಸ್ಟ್ ಫುಡ್‌ನ ಅಪಾಯಗಳ ಬಗ್ಗೆ ಮತ್ತೊಮ್ಮೆ ಜಾಗೃತಿ ಮೂಡಿಸಿದೆ.

 ನಡೆದಿದ್ದೇನು?: 

ಮಹೇಂದ್ರನ್ ಮತ್ತು ಪಡುಮೆಗಲ ದಂಪತಿ ಮಗಳು ಸಂಜನಾ ಖಾಸಗಿ ಶಾಲೆಯಲ್ಲಿ 1 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಸಂಜನಾ ಈರೋಡ್‌ನಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಳು. ಈ ಘಟನೆಗೆ ಎರಡು ದಿನಗಳ ಮೊದಲು, ಸಂಜನಾಳ ಹುಟ್ಟುಹಬ್ಬ  ಇರುವುದರಿಂದ ಅವಳು ತನ್ನ ಹೆತ್ತವರನ್ನು ನೋಡಲು  ಚೆನ್ನೈಗೆ ಬಂದಳು .

ಮಗಳ ಹುಟ್ಟುಹಬ್ಬದ ದಿನ, ಕುಟುಂಬವು ಬೀಚ್‌ಗೆ ಹೋಗಿದ್ದರು. ಈ ವೇಳೆ ಸಂಜನಾ ಚಿಕನ್ ಫ್ರೈಡ್ ರೈಸ್ ತಿಂದಳು. ಸ್ವಲ್ಪ ಸಮಯದ ನಂತರ  ಸಂಜನಾಗೆ ಇದ್ದಕ್ಕಿದ್ದಂತೆ ಜ್ವರ ಬಂದಿತು.  ಮರುದಿನ ಆಸ್ಪತ್ರೆಗೆ ಕರೆದೊಯ್ಯುವಾಗ, ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು. ಗಾಬರಿಗೊಂಡ ಪೋಷಕರು ತಕ್ಷಣ ಅವಳನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ  ಪರೀಕ್ಷಿಸಿದ ವೈದ್ಯರು ಅವಳು ಮೃತಪಟ್ಟಿದ್ದಾಳೆಂದಿದ್ದಾರೆ.

ಬಾಲಕಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಗಮನಿಸಿ:  ಆಹಾರ ಪದ್ಧತಿ ಬಹಳಷ್ಟು ಬದಲಾಗಿದೆ. ಫಾಸ್ಟ್ ಫುಡ್‌ಗಳು, ವಿಶೇಷವಾಗಿ ಚಿಕನ್ ಫ್ರೈಡ್ ರೈಸ್, ನೂಡಲ್ಸ್, ಬರ್ಗರ್‌ಗಳು ಮತ್ತು ಪಿಜ್ಜಾಗಳು ಮಕ್ಕಳು ಮತ್ತು ವಯಸ್ಕರಲ್ಲಿ ಹೆಚ್ಚು ಜನಪ್ರಿಯವಾಗಿವೆ. ಆದರೆ ಅವು ದೇಹಕ್ಕೆ ಉಂಟುಮಾಡುವ ಅಡ್ಡಪರಿಣಾಮಗಳು ಮತ್ತು ನೈರ್ಮಲ್ಯ ಸಮಸ್ಯೆಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net