

ತುಮಕೂರು: ಯುವತಿಯೊಬ್ಬಳು ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ಕೊರಟಗೆರೆಯ ಕೋಟೆಬೀದಿಯಲ್ಲಿ ನಡೆದಿದೆ. ಉಮಾ(25) ಮೃತ ಯುವತಿ. ಈಕೆ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಆರೋಪ ಕೇಳಿಬಂದಿದೆ.
ವೆಂಕಟೇಶ್ ಹಾಗೂ ಉಮಾ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದರು. ಆದರೆ, ಇಬ್ಬರ ನಡುವೆ ಪ್ರೀತಿಯ ವಿಚಾರದಲ್ಲಿ ಇತ್ತೀಚೆಗೆ ಕಲಹ ಉಂಟಾಗಿದೆ. ತಡರಾತ್ರಿ ಜಗಳ ಆಡಿದ ವೆಂಕಟೇಶ್ ಉಮಾಳನ್ನು ಥಳಿಸಿ, ಆ ಬಳಿಕ ಆಕೆಯನ್ನು ಸಾಯಿಸಿ ನೇಣು ಹಾಕಿದ್ದಾನೆಂದು ಆರೋಪಿಸಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರು ಕೊರಟೆಗೆರೆ ಠಾಣಾ ಪೊಲೀಸರು ಆರೋಪಿ ವೆಂಕಟೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)