ಹೆಣ್ಣು ಮಗು ಹುಟ್ಟಿದ್ದಕ್ಕೆ ಮನನೊಂದು ಸಾವಿನ ಮನೆಯ ಕದ ತಟ್ಟಿದ ತಂದೆ!

baby
Published on

ಕೋಲಾರ: ಹೆಣ್ಣು ಮಗು ಹುಟ್ಟಿದ್ದಕ್ಕೆ ಮನನೊಂದ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀನಿವಾಸಪುರ ತಾಲೂಕಿನ ಶೆಟ್ಟಹಳ್ಳಿಯಲ್ಲಿ ನಡೆದಿದೆ.

ಶೆಟ್ಟಿಹಳ್ಳಿಯ ಲೋಕೇಶ್(34) ಮೃತ. 3 ಹೆಣ್ಣುಮಕ್ಕಳಿದ್ದು, 4ನೇ ಮಗುವಿನ ಹೆರಿಗೆಗಾಗಿ ಹೆಂಡತಿ ಶಿರಿಷಾ, ತವರೂರು ಪುಂಗನೂರಿಗೆ ಹೋಗಿದ್ದರು. ದಂಪತಿ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಶುಕ್ರವಾರ ರಾತ್ರಿ ಶಿರಿಷಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ವಿಷಯ ತಿಳಿದು ಮನನೊಂದ ಲೋಕೇಶ್​, ಶೆಟ್ಟಿಹಳ್ಳಿ ಮನೆಯಲ್ಲಿ ಮರುದಿನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಭಾನುವಾರ ಬೆಳಗ್ಗೆ ಎಷ್ಟೊತ್ತಾದರೂ ಕೋಣೆಯಿಂದ ಮಗ ಹೊರಗೆ ಬಾರದೇ ಇದ್ದುದರಿಂದ ಅನುಮಾನಗೊಂಡ ತಂದೆ ಆಂಜನಪ್ಪ, ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಶ್ರೀನಿವಾಸಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net