More

    ಗಾಯಾಳು ತಂದೆಯನ್ನು ಆಸ್ಪತ್ರೆಗೆ ದಾಖಲಿಸಲು 35 ಕಿ.ಮೀ ಸೈಕಲ್ ತುಳಿದ ಬಾಲಕಿ

    ಓಡಿಶಾ: ಗಾಯಾಳು ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಬಾಲಕಿಯೊಬ್ಬಳು 35 ಕಿಲೋಮೀಟರ್​ ಸೈಕಲ್​ ತುಳಿದಿರುವ ಘಟನೆ ಓಡಿಶಾದ ಭದ್ರಕ್​ ಜಿಲ್ಲೆಯಲ್ಲಿ ನಡೆದಿದೆ.

    ಘಟನೆಯು ಅಕ್ಟೋಬರ್ 23ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿ ತನ್ನ ತಂದೆಯನ್ನು ಆಸ್ಪತ್ರೆಯಿಂದ ವಾಪಸ್​ ಮನೆಗೆ ಕರೊದೊಯ್ಯುತ್ತಿದ್ದ ವೇಳೆ ಪತ್ರಕರ್ತರೊಬ್ಬರು ಆಕೆಯನ್ನು ಮಾತನಾಡಿಸಿದಾಗ ಘಟನೆ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಬಹುಕೋಟಿ ಪಡಿತರ ಹಗರಣ; ಪಶ್ಚಿಮ ಬಂಗಾಳದ ಸಚಿವ ಜ್ಯೋತಿಪ್ರಿಯ ಮಲ್ಲಿಕ್​ನನ್ನು ವಶಕ್ಕೆ ಪಡೆದ ED

    ಭದ್ರಕ್​ ಜಿಲ್ಲೆಯ ನಾಡಿಗನ್​ ಗ್ರಾಮದ ನಿವಾಸಿ ಸುಜಾತ ಸೇಥಿ ಅಕ್ಟೋಬರ್​ 22ರಂದು ಗುಂಪುಘರ್ಷಣೆಯಲ್ಲಿ ಗಾಯಗೊಂಡಿದ್ದ ತನ್ನ ತಂದೆಯನ್ನು ತಮ್ಮ ಊರಿನಿಂದ ಸುಮಾರು 14 ಕಿಲೋಮೀಟರ್ ಧಾಮ್​ನಗರದ ಬಳಿ ಇರುವ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಬಳಿಕ ಅಲ್ಲಿನ ಸಿಬ್ಬಂದಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿರುವ ಕಾರಣ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.

    ಆ್ಯಂಬುಲೆನ್ಸ್​ ಅಥವಾ ಖಾಸಗಿ ವಾಹನಕ್ಕೆ ಬಾಡಿಗೆ ನೀಡಲು ಹಣವಿಲ್ಲದ ಕಾರಣ ಸುಜಾತಾ ತನ್ನ ಬಳಿ ಇದ್ದ ಸೈಕಲ್​ ಟ್ರಾಲಿ ಮೂಲಕ ಸುಮಾರು 35 ಕಿಲೋಮೀಟರ್​ ದೂರ ಕ್ರಮಿಸಿ ತನ್ನ ತಂದೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾಳೆ. ಶಸ್ತ್ರಚಿಕಿತ್ಸೆ ಮಾಡಬೇಕಾಗಿದ್ದು, ವೈದ್ಯರು ಒಂದು ವಾರ ಬಿಟ್ಟು ಬರುವಂತೆ ಸೂಚಿಸಿದ್ದಾರೆ. ಇದಕ್ಕಾಗಿ ವಾಪಸ್​ ತೆರಳುತ್ತಿರುವುದಾಗಿ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತ ಬಾಲಕಿಯ ಕಷ್ಟಕ್ಕೆ ಸ್ಪಂದಿಸಿದ ಭದ್ರಕ್​ ಕ್ರೇತ್ರದ ಶಾಸಕ ಅಗತ್ಯ ನೆರವನ್ನು ಘೋಷಿಸಿದ್ದಾರೆ. ಇದಲ್ಲದೆ ಬಾಲಕಿಗೆ ಅನೇಕರು ಸಹಾಯ ಹಸ್ತ ಚಾಚಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts