ಸಖತ್​ ವೈರಲ್​ ಆಗ್ತಿದೆ 'ಘಿಬ್ಲಿ' ಫೋಟೋ; ನಾವು ಎಡಿಟ್ ಮಾಡೋದು ಹೇಗೆ | ghibli

ghibli
Published on

ಜನರು ತಮ್ಮ ನೆಚ್ಚಿನ ಫೋಟೋಗಳು, ಸಿನಿಮಾ ನಟರ ಫೋಟೋಗಳು ಅಥವಾ ಮೀಮ್‌ಗಳನ್ನು ಸ್ಟುಡಿಯೋ ಘಿಬ್ಲಿ ತರಹದ ಚಿತ್ರಗಳಾಗಿ ಬದಲಾಯಿಸುತ್ತಿದ್ದಾರೆ. ನೀವು ಕೂಡ ಘಿಬ್ಲಿ ಫೋಟೋವನ್ನು ಕ್ರಿಯೇಟ್​ ಮಾಡೋದು ಹೇಗೆ ಎಂದು ತಿಳಿಯಿರಿ.

ghibli | ಕೆಲ ದಿನಗಳಿಂದ ಯಾರದ್ದೇ ಸೋಷಿಯಲ್ ಮೀಡಿಯಾ ಪೇಜ್ ನೋಡಿದರೂ ಸಾಕು ಘಿಬ್ಲಿ ಸ್ಟೈಲ್ ಅನಿಮೇಟೆಡ್ ಫೋಟೋ ಕಾಣಿಸುತ್ತೆ. ಅಷ್ಟಕ್ಕೂ ಈ ಘಿಬ್ಲಿ ಫೋಟೋ ಎಂದರೇನು? ಇದನ್ನು ಬಳಕೆ ಮಾಡುವುದು ಹೇಗೆ ಎಂಬುದನ್ನ ತಿಳಿಯೋಣ.

ಘಿಬ್ಲಿ ಹುಟ್ಟಿದ್ದೇಗೆ?

ಸ್ಟುಡಿಯೋ ಘಿಬ್ಲಿ ಒಂದು ಜಪಾನಿನ ಅನಿಮೇಷನ್ ಸ್ಟುಡಿಯೋ ಆಗಿದೆ. ಸ್ಟುಡಿಯೋ ಘಿಬ್ಲಿಯನ್ನು 1985 ರಲ್ಲಿ ಪ್ರಸಿದ್ಧ ನಿರ್ದೇಶಕರಾದ ಹಯಾವೊ ಮಿಯಾಜಾಕಿ, ಇಸಾವೊ ತಕಹತಾ ಮತ್ತು ನಿರ್ಮಾಪಕ ತೋಶಿಯೊ ಸುಜುಕಿ ಎಂಬುವವರು ತಯಾರು ಮಾಡಿದರು. ಇದೀಗ ಚ್ಯಾಟ್ ಜಿಪಿಟಿ ಎಐ ಟೂಲ್​ನ ಜನಪ್ರಿಯ ಫೀಚರ್ ಆಗಿ ಇದು ಸೇರ್ಪಡೆಗೊಂಡಿದ್ದು, ಇಲ್ಲಿ ಘಿಬ್ಲಿ ಸ್ಟೈಲ್ ಫೋಟೋ ಜನರೇಟ್ ಮಾಡುವ ಆಯ್ಕೆ ನೀಡಲಾಗಿದೆ. ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡ್ತಿದ್ದು, ಯಾರದ್ದೇ ಸೋಷಿಯಲ್ ಮೀಡಿಯಾ ಪ್ರೊಫೈಲ್ ನೋಡಿದರೂ ಘಿಬ್ಲಿ ಸ್ಟೈಲ್ ಫೋಟೋ ಕಾಣಿಸುತ್ತಿದೆ.

ಫೋಟೋ ಕ್ರಿಯೇಟ್ ಮಾಡೋದೇಗೆ?

ಈ ಫೋಟೋ ಜನರೇಟ್ ಮಾಡಲು ಮೊದಲು ಚ್ಯಾಟ್ ಜಿಪಿಟಿಗೆ ಹೋಗಬೇಕು. ಇಲ್ಲಿ ನಿಮ್ಮ ಫೋಟೋ ಅಪ್​ಲೋಡ್ ಮಾಡಿ ಇದನ್ನು ಘಿಬ್ಲಿ ಸ್ಟೈಲ್​ಗೆ ಬದಲಾಯಿಸಿ ಎಂದು ಬರೆಯಬೇಕು. ಅದಾದ ನಂತರ ನೀವು ಹಾಕಿದ ಫೋಟೋ ಘಿಬ್ಲಿ ಸ್ಟೈಲ್​ನಲ್ಲಿ ನಿಮಗೆ ಸಿಗುತ್ತದೆ.

ಓಪನ್ ಎಐ ಸಿಇಒ ಸ್ಯಾಮ್ ಆಲ್ಟಾಮನ್ ಎನ್ನುವವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್​ನ ಪ್ರೊಫೈಲ್​ಗೆ ಈ ರೀತಿಯ ತಮ್ಮದೇ ಆದ ಒಂದು ಆನಿಮೇಷನ್ ಫೋಟೋ ಬಳಸಿದರು. ಅದಾದ ಬಳಿಕ ಈಗ ಜಗತ್ತಿನಾದ್ಯಂತ ಘಿಬ್ಲಿ ಫೋಟೋ ವೈರಲ್ ಆಗ್ತಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಲವು ಸೆಲೆಬ್ರಿಟಿಗಳ ಫೋಟೋಗಳನ್ನು ಘಿಬ್ಲಿ ಫೋಟೋ ಆಗಿ ಎಡಿಟ್ ಮಾಡಿ ತಮ್ಮ ಖಾತೆಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

ಗೌಪ್ಯತೆಯ ಬಗ್ಗೆ ಕಳವಳ!

OpenAIನ ಘಿಬ್ಲಿಯ AI ಆರ್ಟ್ ಜನರೇಟರ್ ವಿಚಾರವಾಗಿ ಹಲವು ಜನರು ಡಿಜಿಟಲ್ ಗೌಪ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ನೀವು ChatGPT ಯಲ್ಲಿ ನಿಮ್ಮ ವೈಯಕ್ತಿಕ ಫೋಟೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಘಿಬ್ಲಿ ಫೋಟೋವನ್ನು ರಚಿಸುತ್ತಿದ್ದರೆ, ಇದು ಎಷ್ಟು ಸುರಕ್ಷಿತ ಎಂದು ತಿಳಿದುಕೊಳ್ಳಿ. ಇದು AI ತರಬೇತಿಗಾಗಿ ಸಾವಿರಾರು ವೈಯಕ್ತಿಕ ಫೋಟೋಗಳನ್ನು ಸಂಗ್ರಹಿಸಲು ಮಾಡುತ್ತಿರುವ ಒಂದು ತಂತ್ರವಾಗಿರಬಹುದು ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net