

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಫೆ.28ರಂದು ಸಮರ್ಪಣೆಯಾಗಲಿರುವ ಹೊರೆಕಾಣಿಕೆ ಬಗ್ಗೆ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಭಕ್ತರ ಸಮಾಲೋಚನಾ ಸಭೆ ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಹೊರೆಕಾಣಿಕೆಯನ್ನು ಬೆಳ್ತಂಗಡಿ ತಾಲೂಕಿನ ಏಳು ಜಿಪಂ, ಬೆಳ್ತಂಗಡಿ ನಗರ ವ್ಯಾಪ್ತಿಯಿಂದ ಸಮರ್ಪಿಸುವ ಬಗ್ಗೆ ಚರ್ಚಿಸಲಾಯಿತು. ಪ್ರತಿ ಕ್ಷೇತ್ರದಿಂದ ಎರಡು ವಾಹನದಲ್ಲಿ ಹೊರೆಕಾಣಿಕೆಯೊಂದಿಗೆ ಹೊರಟು ಪುತ್ತೂರಿನಲ್ಲಿ ಒಂದು ಗಂಟೆಗೆ ಸೇರಿ ಅಲ್ಲಿಂದ ಗೆಜ್ಜೆಗಿರಿಗೆ ಮೆರವಣಿಗೆಯೊಂದಿಗೆ ತೆರಳುವುದೆಂದು ನಿರ್ಧರಿಸಲಾಯಿತು.
ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಬಿ.ಪೀತಾಂಬರ ಹೆರಾಜೆ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಜಯಂತ ಕೋಟ್ಯಾನ್ ಮರೋಡಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘ ಮಾಜಿ ಅಧ್ಯಕ್ಷ ಜಯರಾಮ ಬಂಗೇರ ಹೆರಾಜೆ, ಬೆಳ್ತಂಗಡಿ ನಗರ ಸಂಚಾಲಕ ಕರುಣಾಕರ, ಲಾಯಿಲ ವಲಯ ಸಂಚಾಲಕ ಸೌಮ್ಯಾ, ಕುವೆಟ್ಟು ವಲಯ ಸಂಚಾಲಕ ಶಾಂತ ಕುವೆಟ್ಟು, ಪ್ರಮೋದ್ ಮಚ್ಚಿನ, ಬೆಳ್ತಂಗಡಿ ತಾಪಂ ಮಾಜಿ ಸದಸ್ಯ ಮಂಜುನಾಥ್ ಸಾಲಿಯಾನ್, ಕಣಿಯೂರು ವಲಯ ಸಂಚಾಲಕ ಉಷಾ ಶರತ್, ಅಳದಂಗಡಿ ವಲಯ ಸಂಚಾಲಕ ಮಧುರ ರಾಘವ, ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಪಾರೆಂಕಿ, ನಾರಾವಿ ವಲಯ ಸಂಚಾಲಕ ಯಶೋಧರ ಮರೋಡಿ, ಸುಲ್ಕೇರಿ ಗ್ರಾಪಂ ಉಪಾಧ್ಯಕ್ಷ ಶುಭಕರ ಕುದ್ಯಾಡಿ, ಮಾಲಾಡಿ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದಿನೇಶ್ ಡಿ.ಕರ್ಕೇರ, ಮಡಂತ್ಯಾರ್ ಗುರುನಾರಾಯಣ ಸೇವಾ ಸಂಘ ಅಧ್ಯಕ್ಷ ವೆಂಕಪ್ಪ ಕೋಡ್ಲಕ್ಕೆ, ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘ ನಿರ್ದೇಶಕ ಹರಿದಾಸ್ ಕೇದೆ ಮುಂತಾದವರು ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರಾ ಮಹೋತ್ಸವ ಬೆಳ್ತಂಗಡಿ ತಾಲೂಕು ಪ್ರಧಾನ ಸಂಚಾಲಕ ನಿತ್ಯಾನಂದ ನಾವರ ಸ್ವಾಗತಿಸಿದರು. ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ವಂದಿಸಿದರು.