ಜನರಿಂದ ಸಿಗಲಿ ಅಭಿವೃದ್ಧಿಗೆ ಸಹಕಾರ: ಶಾಸಕ ಉಮನಾಥ್ ಕೋಟ್ಯಾನ್ ಆಶಯ

Mul_development
Published on

ಮೂಲ್ಕಿ: ಮೂಲ್ಕಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಮಹತ್ವ ನೀಡುತ್ತಿದ್ದು, ನಗರ ವಾಸಿಗಳು ಸಹಕಾರ ನೀಡಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಸಕ ಉವಾನಾಥ ಎ.ಕೋಟ್ಯಾನ್ ಹೇಳಿದರು.

ಮೂಲ್ಕಿ ನಗರ ಪಂಚಾಯಿತಿಗೆ ಸ್ವಚ್ಛ ಭಾರತ್ ಮಿಷನ್(ನಗರ) 2.0 ಯೋಜನೆಯಡಿ 41.5 ಲಕ್ಷ ರೂ. ವೆಚ್ಚದ ಎಂಆರ್‌ಎಫ್ ಘಟಕ ನಿರ್ವಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ನಗರ ಪಂಚಾಯಿತಿ ವಾಜಿ ಅಧ್ಯಕ್ಷ ಸುನೀಲ್ ಆಳ್ವ, ಉಪಾಧ್ಯಕ್ಷೆ ಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಸದಸ್ಯರಾದ ಸುಭಾಷ್ ಶೆಟ್ಟಿ, ಶೈಲೇಶ್ ಕುವಾರ್, ವಂದನಾ ಕಾಮತ್, ದಯಾವತಿ ಅಂಚನ್, ರಾಧಿಕಾ ಕೋಟ್ಯಾನ್, ಮುಖ್ಯಾಧಿಕಾರಿ ಮಧುಕರ್ ಕೆ., ಆರೋಗ್ಯಾಧಿಕಾರಿ ಶಶಿರೇಖಾ, ಸ್ಥಳೀಯರಾದ ಸಾಧು ಅಂಚನ್ ಮಟ್ಟು, ಅಶೋಕ್ ಜನನಿ, ವಿಠಲ್ ಎನ್.ಎಂ., ಗುತ್ತಿಗೆದಾರ ಯೂಸುಫ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net