

ಕಲಬುರಗಿ: ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಕೊಲೆ ಮಾಡಿ ಪತಿ ಆತ್ಮಹತ್ಯೆ ಮಾಡಿಕೊಂಡು ಹೃದಯವಿದ್ರಾವಕ ಟನೆ ನಗರದ ಹಳೇ ಜೇವರ್ಗಿ ರಸ್ತೆಯ ಕೆಎಚ್ಬಿ ಕಾಲನಿಯ ಅಪಾರ್ಟ್ಮೆಂಟ್ ಒಂದರಲ್ಲಿ ಬುಧವಾರ ಸಂಜೆ ನಡೆದಿದೆ.
ಸಂತೋಷ ಭೀಮಶಾ ಕೊರಳ್ಳಿ (47) ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡವ. ಶೃತಿ (32), ಮನೀಷ (9) ಹಾಗೂ ಹನೀಶ ನಾಲ್ಕೂವರೆ ತಿಂಗಳ ಹಸುಗೂಸು ಮೃತಪಟ್ಟವರು.
ಜೆಸ್ಕಾಂ ಅಧಿಕಾರಿ ಆಗಿರುವ ಸಂತೋಷನು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಇಬ್ಬರು ಗಂಡುಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದು, ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೌಟುಂಬಿಕ ಕಲಹ, ಮಾನಸಿಕ ಸಮಸ್ಯೆ ಟನೆಗೆ ಕಾರಣ ಎಂದು ತಿಳಿದು ಬಂದಿದೆ. ಸ್ಟೇಷನ್ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಟನೆ ನಡೆದಿದೆ.