ತ್ಯಾಜ್ಯ ಸಂಗ್ರಹ ಶುಲ್ಕ ವಸೂಲಾತಿ : 34 ನೆಕ್ಕಿಲಾಡಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಗ್ರಾಮಸ್ಥರ ಆಗ್ರಹ

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

34 ನೆಕ್ಕಿಲಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹದ ಶುಲ್ಕ ವಸೂಲಾತಿಯಲ್ಲಿ ವೇಗ ಸೃಷ್ಠಿಸಿ ಸಮರ್ಪಕ ತ್ಯಾಜ್ಯ ನಿರ್ವಹಣೆ ನಡೆಸಬೇಕೆಂದು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.

ಗ್ರಾ.ಪಂ.ಅಧ್ಯಕ್ಷೆ ಸುಜಾತ ಆರ್.ರೈ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಪ್ರಶಾಂತ್ ಕುಮಾರ್, ತ್ಯಾಜ್ಯ ವಿಲೇವಾರಿ ಮಾಡುವವರಿಗೆ ನಾವು ತಿಂಗಳಿಗೆ 75 ಸಾವಿರ ರೂ.ಕೊಡುತ್ತೇವೆ. ಆದರೆ ಕಸ ಸಂಗ್ರಹಕ್ಕೆ ಗ್ರಾಮಸ್ಥರಿಂದ ಶುಲ್ಕ ವಸೂಲಾತಿ ಆಗುತ್ತಿಲ್ಲ. ರಸ್ತೆ ಇದ್ದರೂ ಕೆಲವು ಕಡೆ ಕಸದ ವಾಹನ ಬರುತ್ತಿಲ್ಲ. ಅವರು ಸಮಯ ಪಾಲನೆಯನ್ನೂ ಮಾಡುತ್ತಿಲ್ಲ ಎಂದು ದೂರಿದರು. ಹಾಗೂ ತ್ಯಾಜ್ಯ ಸಂಗ್ರಹಣೆಯ ಬಗ್ಗೆ ಕೆಲವು ವಾರ್ಡ್‌ಗಳಲ್ಲಿ ಶುಲ್ಕ ಸಂಗ್ರಹವಾಗುತ್ತಿಲ್ಲ ಎಂದು ಅಪಾದಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಪಿಡಿಒ ಸತೀಶ್ ಬಂಗೇರ ತ್ಯಾಜ್ಯ ಶುಲ್ಕ ವಸೂಲಾತಿಯ ಜವಾಬ್ದಾರಿಯನ್ನು ಸಂಜೀವಿನಿಯವರಿಗೆ ನೀಡಬೇಕೆಂಬ ಸರ್ಕಾರದ ಸುತ್ತೋಲೆ ಇದೆ ಎಂದರು.

ಬೇರಿಕೆ ಬಸ್ ನಿಲ್ದಾಣ ಬಳಿಯ ರಾಜ್ಯ ಹೆದ್ದಾರಿಯ ಮಾರ್ಜಿನ್‌ನಲ್ಲಿ ಅನಧಿಕೃತ ತರಕಾರಿ ಅಂಗಡಿಯೊಂದು ತಲೆ ಎತ್ತಿದ್ದು, ಅದನ್ನು ತೆರವುಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.

ಗ್ರಂಥಾಲಯ ಸಿಬ್ಬಂದಿಯ ತರಬೇತಿ ವೆಚ್ಚವನ್ನು ಗ್ರಾ.ಪಂ.ನ ನಿಧಿ-1ರಿಂದ ಪಾವತಿಸಲು ಜಿ.ಪಂ. ಆದೇಶ ಮಾಡಿರುವ ಕುರಿತು ಪಿಡಿಒ ವಿಷಯ ಪ್ರಸ್ತಾಪಿಸಿದಾಗ ಮಾತನಾಡಿದ ಸದಸ್ಯ ಪ್ರಶಾಂತ್ ಕುಮಾರ್, ಗ್ರಂಥಾಲಯ ಸಿಬ್ಬಂದಿಯನ್ನು ತರಬೇತಿಗೆ ಆಯ್ಕೆ ಮಾಡಿದ ಬಗ್ಗೆ ಗ್ರಾ.ಪಂ.ಗೆ ಮಾಹಿತಿಯಿಲ್ಲ. ಹಾಗಾಗಿ ತರಬೇತಿ ಶುಲ್ಕವನ್ನು ಗ್ರಾ.ಪಂ. ಸ್ವಂತ ನಿಧಿಯಿಂದ ಭರಿಸಲು ಆಕ್ಷೇಪವಿದೆ ಎಂದರು.

ಗ್ರಾ.ಪಂ.ಉಪಾಧ್ಯಕ್ಷ ಹರೀಶ್ ಡಿ., ಸದಸ್ಯರಾದ ಸ್ವಪ್ನ, ವಿಜಯಕುಮಾರ್, ವೇದಾವತಿ, ತುಳಸಿ, ಹರೀಶ್ ಕೆ., ಕೆ. ರಮೇಶ ನಾಯ್ಕ, ರತ್ನಾವತಿ, ಎ.ಗೀತಾ ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು. ಗ್ರಾ.ಪಂ. ಪಿಡಿಒ ಸತೀಶ ಕೆ. ಬಂಗೇರ ಸ್ವಾಗತಿಸಿ, ವಂದಿಸಿದರು.

ಗ್ರಾ.ಪಂ.ಗೆ ಹಣ ಪಾವತಿಸಿಲ್ಲ

ಸಾಮಾಜಿಕ ಅರಣ್ಯ ಇಲಾಖೆಯ ನೆಡುತೋಪಿನಿಂದ ಮರಗಳನ್ನು ಕಡಿಯುವಾಗ ಅದರ 50ಶೇ. ಹಣವನ್ನು ಗ್ರಾ.ಪಂ.ಗೆ ಪಾವತಿಸಬೇಕೆಂದು ಆದೇಶವಿದೆ. ಆದರೆ 34 ನೆಕ್ಕಿಲಾಡಿಯ ಶಕ್ತಿನಗರದ ಇಂದಾಜೆ ಬಳಿ ಸಾಮಾಜಿಕ ಅರಣ್ಯ ಇಲಾಖೆಯ ನೆಡುತೋಪಿನಿಂದ ಸಾಮಾಜಿಕ ಅರಣ್ಯ ಇಲಾಖೆಯವರು ಮರಗಳನ್ನು ಕಡಿದಿದ್ದು, ಅದರ ಶೇ.50 ಹಣವನ್ನು ಗ್ರಾ.ಪಂ.ಗೆ ಪಾವತಿಸಿಲ್ಲ. ಈ ಹಣದ ಪಾವತಿಗೆ ಕೋರಿ ಸಾಮಾಜಿಕ ಅರಣ್ಯ ಇಲಾಖೆಗೆ ಪತ್ರ ಬರೆಯಲು ನಿರ್ಣಯಿಸಲಾಯಿತು. ದರ್ಬೆ ಟಿ.ಸಿ.ಯಲ್ಲಿನ ಹಳೆ ಲೈನ್‌ಗಳನ್ನು ತೆಗೆದು ಹೊಸ ವಿದ್ಯುತ್ ತಂತಿಗಳನ್ನು ಅಳವಡಿಸಲು ನಿರ್ಣಯ ಕೈಗೊಳ್ಳಲಾಯಿತು.

Share This Article

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…