ರಾಜಸ್ಥಾನ ಜಿಲ್ಲೆಗಳ ಸಂಖ್ಯೆ 50 ರಿಂದ 53ಕ್ಕೆ ಏರಿಕೆ; ಸಿಎಂ ಗೆಹ್ಲೋಟ್ ಘೋಷಣೆ

CM Gehlot
Published on

ರಾಜಸ್ಥಾನ: ರಾಜಸ್ಥಾನದಲ್ಲಿ ಇನ್ನೂ ಮೂರು ಹೊಸ ಜಿಲ್ಲೆಗಳನ್ನು ರಚಿಸುವುದಾಗಿ ಘೋಷಿಸಲಾಗಿದೆ. ಈ ವಿಷಯವನ್ನು ಸ್ವತಃ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ ಪ್ರಕಟಿಸಿದ್ದಾರೆ. ಸಾರ್ವಜನಿಕರ ಬೇಡಿಕೆ ಮತ್ತು ಉನ್ನತ ಮಟ್ಟದ ಸಮಿತಿಯ ಶಿಫಾರಸಿನ ಮೇರೆಗೆ ರಾಜಸ್ಥಾನದಲ್ಲಿ ಇನ್ನೂ ಮೂರು ಹೊಸ ಜಿಲ್ಲೆಗಳನ್ನು ರಚಿಸಲಾಗುವುದು ಎಂದು ಗೆಹ್ಲೋಟ್ ಹೇಳಿದರು. ಇವುಗಳಲ್ಲಿ ಮಾಲ್ಪುರ, ಸುಜನ್‌ಗಢ್​​​, ಕುಚಮನ್ ಸಿಟಿಯ ಹೆಸರುಗಳು ಸೇರಿವೆ.

ಇನ್ನು ಮುಂದೆ ರಾಜಸ್ಥಾನ 53 ಜಿಲ್ಲೆಗಳ ರಾಜ್ಯವಾಗಲಿದೆ ಎಂದು ಗೆಹ್ಲೋಟ್ ಹೇಳಿದರು. ಭವಿಷ್ಯದಲ್ಲಿಯೂ, ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನಂತೆ ಗಡಿ ಗುರುತಿಸುವಿಕೆ ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸಲಾಗುವುದು.

ಈ ವರ್ಷಾಂತ್ಯಕ್ಕೆ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಈ ವರ್ಷ ಎರಡನೇ ಬಾರಿಗೆ ಕಾಂಗ್ರೆಸ್ ಸರ್ಕಾರ ಹೊಸ ಜಿಲ್ಲೆಗಳನ್ನು ಘೋಷಿಸಿದೆ. ಹಿಂದಿನ ಆಗಸ್ಟ್‌ನಲ್ಲಿ, ರಾಜಸ್ಥಾನದಲ್ಲಿ ಹದಿನೇಳು ಹೊಸ ಜಿಲ್ಲೆಗಳು ಮತ್ತು ಮೂರು ವಿಭಾಗಗಳು ಅಸ್ತಿತ್ವಕ್ಕೆ ಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net