ದೇಶೀಯ ಸಂಸ್ಕೃತಿ ಬಿಂಬಿಸುವ ಗೀತಾಮಂದಿರ

mela
ಉಡುಪಿ ಗೀತಾಮಂದಿರದಲ್ಲಿ ಆಯೋಜಿಸಿರುವ ಭಾರತ ಮೇಳವನ್ನು ಭಂಡಾರಕೇರಿ ಮಠದ ವಿದ್ಯೇಶ ಶ್ರೀ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಉಡುಪಿ

ಎಲ್ಲ ಗ್ರಂಥಗಳಲ್ಲಿ ಮಹಾಭಾರತ ಸರ್ವಶ್ರೇಷ್ಠ ಗ್ರಂಥವಾಗಿದ್ದು, ಅದರಲ್ಲಿ ಭಗವದ್ಗೀತೆ ಶ್ರೇಷ್ಠವಾದುದೆಂದು ಅನೇಕ ಋಷಿ-ಮುನಿಗಳು ಉಲ್ಲೇಖಿಸಿದ್ದಾರೆ. ಶ್ರೀಕೃಷ್ಣನಿಂದ ಬೋಧಿಸಲ್ಪಟ್ಟ ಗೀತೆಯ ಪ್ರಚಾರ, ಪ್ರಸಾರ ಕಾರ್ಯದಲ್ಲಿ ವಿಶ್ವದ ಏಕೈಕ ಕೇಂದ್ರವಾದ ಗೀತಾಮಂದಿರವು 30 ವರ್ಷದಿಂದ ತೊಡಗಿಸಿಕೊಂಡಿದೆ. ಇದೀಗ ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ವೈಭವ ಹಾಗೂ ವೈಶಿಷ್ಟ್ಯಗಳನ್ನು ಜನಮಾನಸಕ್ಕೆ ತಲುಪಿಸಲು ಗೀತಾಮಂದಿರ ಇನ್ನೊಂದು ಹೆಜ್ಜೆ ಇಟ್ಟಿದೆ ಎಂದು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಉಡುಪಿ ಜಿಪಂ, ತುಳುಕೂಟ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಗೀತಾ ಮಂದಿರದಲ್ಲಿ ಆಯೋಜಿಸಿರುವ 10 ದಿನಗಳ ‘ಭಾರತ ಮೇಳ’ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶನಿವಾರ ಆಶೀರ್ವಚನ ನೀಡಿದರು.

ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಪುತ್ತಿಗೆ ಮಠದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು, ಬೆಂಗಳೂರಿನ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವ ವಿದ್ಯಾನಿಲಯದ ಉಪಕುಲಪತಿ ಎಸ್.ಅಹಲ್ಯಾ, ತುಳು ಕೂಟದ ರತ್ನಾಕರ ಇಂದ್ರಾಳಿ, ಶಿವಕುಮಾರ ಅಂಬಲಪಾಡಿ, ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ದಿವಾನ ನಾಗರಾಜ ಆಚಾರ್ಯ, ಸಾಂಸ್ಕೃತಿ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ವಿದ್ವಾನ್ ಬಿ.ಗೋಪಾಲ ಆಚಾರ್ಯ ಇತರರು ಉಪಸ್ಥಿತರಿದ್ದರು. ಮೇಳದ ಸಂಚಾಲಕ ಕೆ.ವಿ.ರಮಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಹತ್ತಾರು ಬಗೆಯ ಮಳಿಗೆಗಳು

ಗೀತಾ ಮಂದಿರದಲ್ಲಿ ಸಂಪೂರ್ಣ ಭಗವದ್ಗೀತಾ ದರ್ಶನ, ಉದಯಾಸ್ತಮಾನ ಗೀತಾ ಪಾರಾಯಣ, ಪಾರಂಪರಿಕ ವಸ್ತುಗಳ ಪ್ರದರ್ಶನ, ಧಾರ್ಮಿಕ, ಸಾಂಸ್ಕೃತಿಕ ಚಲನಚಿತ್ರ, ಕೃತಕ ಆಭರಣ, ಅನುಭವ ಮಂಟಪ, ಖಾದಿ ಭಂಡಾರ, ಕೈಮಗ್ಗದ ಸೀರೆ, ಕರಕುಶಲ ವಸ್ತುಗಳು, ಗವ್ಯ ಉತ್ಪನ್ನ, ಛಾಯಾಚಿತ್ರ-ಪುಸ್ತಕ ಪ್ರದರ್ಶನ, ಜ್ಯೋತಿಷ, ಖಗೋಳ, ಕೃಷಿ ಉತ್ಪನ್ನ, ಮಡಕೆ, ಆಕಾಶ ಕಾಗಳ ವೀಕ್ಷಣೆ, ಯಕ್ಷಗಾನ, ಜಾನಪದ, ಗಂಜೀಾ ಕಲೆಯ ವೈಭವ ಹೀಗೆ ಅನೇಕ ಬಗೆಯ ಮಳಿಗೆಗಳನ್ನು ತೆರೆಯಲಾಗಿದೆ.

ಉಡುಪಿಗೆ ಶ್ರೀಕೃಷ್ಣನ ದರ್ಶನಕ್ಕೆ ಬಂದವರು ಗೀತಾಮಂದಿರಕ್ಕೆ ಬಂದು ಭಗವದ್ಗೀತೆಯ ಜ್ಞಾನ ಪಡೆಯುವಂತಾಗಬೇಕು. ಶ್ರೀಕೃಷ್ಣನ ಬಾಲಲೀಲೆ ಹಾಗೂ ಮಧ್ವಾಚಾರ್ಯರ ತತ್ವಗಳನ್ನು ತಿಳಿದುಕೊಳ್ಳಲು ಸಣ್ಣ ಸಿನಿಮಾ ತುಣುಕುಗಳನ್ನೂ ವೀಕ್ಷಿಸಬಹುದಾಗಿದೆ. ಸುಗುಣೇಂದ್ರ ತೀರ್ಥ ಶ್ರೀಪಾದರು, ಪರ್ಯಾಯ ಪುತಿಗೆ ಮಠ https://www.vijayavani.net/new-idol-of-kala-rahu-installed-at-kabbinale-temple https://www.vijayavani.net/difficulties-go-away-when-faced-effectively

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net