More

    ಪಟಾಕಿ ಸ್ಫೋಟದ ಸ್ಥಳದಲ್ಲೇ ಅಕ್ರಮವಾಗಿ ಶೇಖರಿಸಿಟ್ಟಿದ್ದ ಗ್ಯಾಸ್ ಸಿಲಿಂಡರ್​ಗಳು ಪತ್ತೆ!

    ಬೆಂಗಳೂರು: ನಗರದ ನ್ಯೂತರಗುಪೇಟೆಯಲ್ಲಿ ನಿನ್ನೆ ಪಟಾಕಿ ಬಾಕ್ಸ್​​ಗಳು ಸ್ಪೋಟಗೊಂಡು ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿರುವ ವಿವಿಧ ಗೋಡೌನುಗಳ ಪರಿಶೀಲನೆ ನಡೆಸಿದರು. ದೀಪಾವಳಿ ಹಿನ್ನೆಲೆಯಲ್ಲಿ ಬೇರೆ ಕಟ್ಟಡಗಳಲ್ಲೂ ಅಕ್ರಮವಾಗಿ ಪಟಾಕಿ ಸಂಗ್ರಹಿಸಲಾಗಿದೆಯೇ ಎಂದು ಪತ್ತೆ ಹಚ್ಚಲು ನಡೆದ ಶೋಧ ಕಾರ್ಯಾಚರಣೆಯಲ್ಲಿ, ಅಕ್ರಮವಾಗಿ ಗ್ಯಾಸ್​ ಸಿಲಿಂಡರ್​ಗಳನ್ನು ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.

    ಇಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನದವರೆಗೆ ನ್ಯೂತರಗುಪೇಟೆಯ ನಾಲ್ಕು ಮುಖ್ಯರಸ್ತೆಗಳಲ್ಲಿರುವ ಗೋಡೌನುಗಳನ್ನು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ವಿ.ವಿ.ಪುರ, ಗಿರಿನಗರ, ನಗರ ಹಾಗೂ ಶಂಕರಪುರ ಠಾಣೆಗಳ 100 ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ಪರಿಶೀಲಿಸಿದರು. ಎಲ್ಲಾ ಅಂಗಡಿ ಮಾಲೀಕರಿಗೆ ಫೋನ್ ಮಾಡಿ ಗೋಡೌನ್ ಬಳಿ ಕರೆಸಿಕೊಂಡಿದ್ದ ಪೊಲೀಸರು, ಒಂದೊಂದು ರಸ್ತೆಯಲ್ಲಿ ಒಂದೊಂದು ಪೊಲೀಸ್ ಠಾಣೆ ಸಿಬ್ಬಂದಿ ಎಂಬಂತೆ ಸರ್ಚ್ ಆಪರೇಷನ್ ನಡೆಸಲಾಯಿತು.

    ಇದನ್ನೂ ಓದಿ: ಶಾಲೆಗಳಲ್ಲಿ ಕಡ್ಡಾಯ ಕನ್ನಡ ಶಿಕ್ಷಣ: ಸರ್ಕಾರಕ್ಕೆ ಎಚ್​ಡಿಕೆ ತಾಕೀತು

    ಈ ವೇಳೆ, ನ್ಯೂತರಗುಪೇಟೆಯ 3 ನೇ ಮುಖ್ಯರಸ್ತೆಯಲ್ಲಿರುವ ಬಾಲಾಜಿ ಕಾಫಿ ಟ್ರೇಡಿಂಗ್ ಗೋಡೌನಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಗ್ಯಾಸ್ ಸಿಲಿಂಡರ್​ಗಳು ಪತ್ತೆಯಾಗಿವೆ. ಈ ಗೋಡೌನಿನಲ್ಲಿ ಕಾಫಿ ಬೀಜಗಳನ್ನು ದಾಸ್ತಾನು ಮಾಡಲಾಗಿತ್ತು. ಜೊತೆಗೆ, 47 ಕೆಜಿ ತೂಕದ 17 ಗ್ಯಾಸ್​ ಸಿಲಿಂಡರ್​ಗಳನ್ನು ಯಾವುದೇ ಲೈಸೆನ್ಸ್ ಪಡೆಯದೇ ದಾಸ್ತಾನು ಮಾಡಲಾಗಿತ್ತು. ಈ ಸಿಲಿಂಡರ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್)

    ಕಾಂಗ್ರೆಸ್​ ಸೈಕಲ್-ಟಾಂಗಾ ಓಡಿಸೋಕೇ ಸೀಮಿತ! ಸೋಲು ಮರೆಮಾಚಲು ದೊಂಬರಾಟ ಮಾಡ್ತಿದ್ದಾರೆ: ಸಚಿವ ಅಶೋಕ್

    ಕರೊನಾ ಭಯ ನೀಗುವುದು ಯಾವಾಗ? ಒಳ್ಳೆಯ ದಿನಗಳು ಬರಲಿವೆ ಎನ್ನುತ್ತಾರೆ ಆಕ್ಸ್​ಫರ್ಡ್​ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts