More

    ಕರೊನಾ ಭಯ ನೀಗುವುದು ಯಾವಾಗ? ಒಳ್ಳೆಯ ದಿನಗಳು ಬರಲಿವೆ ಎನ್ನುತ್ತಾರೆ ಆಕ್ಸ್​ಫರ್ಡ್​ ವಿಜ್ಞಾನಿ

    ಲಂಡನ್​​: ಜಗತ್ತನ್ನೆಲ್ಲಾ ಆವರಿಸಿಕೊಂಡು ಜನಜೀವನವನ್ನು ಅಸ್ತವ್ಯಸ್ತಗೊಳಿಸಿರುವ ಕರೊನಾ ವೈರಸ್​​ ಸದ್ಯಕ್ಕೆ ಪ್ರಪಂಚವನ್ನು ಬಿಟ್ಟು ಹೋಗುವುದಿಲ್ಲ ಎಂಬ ಕಹಿಸಂಗತಿಯನ್ನು ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ವೈರಸ್​​ ಅಸ್ತಿತ್ವದಲ್ಲಿದ್ದರೂ ಸಾಧಾರಣ ನೆಗಡಿ ಕೆಮ್ಮು ಉಂಟುಮಾಡುವ ಇತರ ವೈರಸ್​ಗಳಂತೆ ಪರಿವರ್ತಿತವಾಗುವ ದಿನಗಳು ಬರುತ್ತವೆ ಎಂಬ ಆಶಾವಾದದ ಮಾತು ಇದೀಗ ಕೇಳಿಬಂದಿದೆ.

    ಆಕ್ಸ್​ಫರ್ಡ್​ ಆಸ್ಟ್ರಜೆನೆಕಾ ಕರೊನಾ ಲಸಿಕೆಯನ್ನು ರೂಪಿಸಿದ ವಿಜ್ಞಾನಿಗಳ ತಂಡದ ನೇತೃತ್ವ ವಹಿಸಿದ ಪ್ರೊಫೆಸರ್​ ಡೇಮ್​ ಸಾರಹ್ ಗಿಲ್ಬರ್ಟ್​ ಈ ಸಾಧ್ಯತೆಯ ಬಗ್ಗೆ ತಿಳಿಸಿದ್ದಾರೆ. ಲಂಡನ್ನಿನ ರಾಯಲ್​ ಸೊಸೈಟಿ ಆಫ್​ ಮೆಡಿಸಿನ್​ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇನ್ನೂ ಮಾರಕವಾದ ಕರೊನಾ ವೈರಸ್​ ರೂಪಾಂತರ ಹೊರಹೊಮ್ಮಬಹುದೆಂಬ ಭಯಕ್ಕೆ ಕಾರಣವಿಲ್ಲ. ಬದಲಿಗೆ ಈ ವೈರಸ್​ ಕೂಡ ಕ್ರಮೇಣ ಬಲಹೀನವಾಗಿ ಕಾಮನ್​ ಕೋಲ್ಡ್​ ವೈರಸ್​ನಂತಾಗಲಿದೆ ಎಂದಿದ್ದಾರೆ.

    ಇದನ್ನೂ ಓದಿ: ವಿದ್ಯಾರ್ಥಿ ಬಸ್​ಪಾಸ್ ಅವಧಿ ವಿಸ್ತರಣೆ: ನವೆಂಬರ್​ವರೆಗೂ ಉಚಿತ ಪ್ರಯಾಣ

    “ವೈರಸ್​ಗಳು ಜನರ ನಡುವೆ ಹೆಚ್ಚು ಸುಲಭವಾಗಿ ಸಂಚರಿಸಿದಂತೆಲ್ಲಾ ಅವು ಕಡಿಮೆ ಅಪಾಯಕಾರಿಯಾಗುವುದನ್ನು ನಾವು ನೋಡಿದ್ದೇವೆ. ಆದ್ದರಿಂದ ಕೋವಿಡ್​-19 ಸೋಂಕಿಗೆ ಕಾರಣವಾಗಿರುವ ಸಾರ್ಸ್​-ಕೋವಿ-2 ವೈರಸ್​ ಹೆಚ್ಚು ಅಪಾಯಕಾರಿ ರೂಪ ತಾಳಬಹುದೆಂದು ಯೋಚಿಸಲು ಕಾರಣವಿಲ್ಲ” ಎಂದಿರುವ ಗಿಲ್ಬರ್ಟ್​, “ನಾವು ಅದಾಗಲೇ ನಾಲ್ಕು ಬಗೆಯ ಮಾನವ ಕರೊನಾ ವೈರಸ್​ಗಳೊಂದಿಗೆ ಹೆಚ್ಚು ಯೋಚಿಸದೆ ಬದುಕುತ್ತಿದ್ದೇವೆ. ಕ್ರಮೇಣ ಕೋವಿಡ್​-19 ಕೂಡ ಅವುಗಳಲ್ಲಿ ಒಂದಾಗಲಿದೆ. ಅದಕ್ಕಾಗಿ ಎಷ್ಟು ಸಮಯ ಬೇಕಾಗಲಿದೆ ಮತ್ತು ಅಲ್ಲಿಯವರೆಗೆ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಏನು ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವುದಷ್ಟೆ ಪ್ರಶ್ನೆಯಾಗಿದೆ” ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ತಾವು ಧರಿಸಿದ್ದ ಮಾಸ್ಕನ್ನೇ ತೆಗೆದು ಸಂಸದರಿಗೆ ತೊಡಿಸಿದ ಸಚಿವ!

    ಪೆಗಾಸಸ್​ ಫೋನ್​ ಟ್ಯಾಪ್​ ಆರೋಪದ ತನಿಖೆ ನಡೆಸಲಿದೆ, ಸುಪ್ರೀಂ ಕೋರ್ಟ್​ ತಜ್ಞರ ಸಮಿತಿ

    ಅಚ್ಚರಿಯಾಗುವಂತೆ ಹೊಟ್ಟೆಯ ಬೊಜ್ಜು ಕರಗಿಸುತ್ತದೆ, ಈ ಯೋಗಾಸನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts