More

    ಕಾಂಗ್ರೆಸ್​ ಸೈಕಲ್-ಟಾಂಗಾ ಓಡಿಸೋಕೇ ಸೀಮಿತ! ಸೋಲು ಮರೆಮಾಚಲು ದೊಂಬರಾಟ ಮಾಡ್ತಿದ್ದಾರೆ: ಸಚಿವ ಅಶೋಕ್

    ಬೆಂಗಳೂರು: ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ್​ ಸೋತು ಸುಣ್ಣ ಆದ ಮೇಲೆ ದಿನಕ್ಕೊಂದು ಗಿಮಿಕ್ ಮಾಡ್ತಾ ಇದ್ದಾರೆ. ರಾಜ್ಯದ ಪಾಲಿಕೆ ಚುನಾವಣೆಗಳಲ್ಲೂ ಮೂಲೆಗುಂಪಾಗಿರುವ ಕಾಂಗ್ರೆಸ್, ಟಾಂಗಾ ಓಡಿಸೋದಕ್ಕೆ, ಸೈಕಲ್ ಓಡಿಸೋದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಬಿಜೆಪಿ ನಾಯಕ ಹಾಗೂ ಕಂದಾಯ ಸಚಿವ ಆರ್​.ಅಶೋಕ್​ ವ್ಯಂಗ್ಯವಾಡಿದ್ದಾರೆ.

    ಇಂಧನ ಬೆಲೆ ವಿರೋಧಿಸಿ ಇಂದು ವಿಧಾನಸೌಧದ ಬಳಿ ಕಾಂಗ್ರೆಸ್​ ನಾಯಕರು ಟಾಂಗಾ ಮೇಲೆ ಹೋಗಿ ಪ್ರತಿಭಟನೆ ನಡೆಸಿದ್ದರ ಬಗ್ಗೆ ಅಶೋಕ್​​ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಯಾವತ್ತಾದ್ರೂ ಪೆಟ್ರೋಲ್‌ ಡಿಸೇಲ್ ಬೆಲೆ‌ ಕಮ್ಮಿ‌ ಆಗಿತ್ತಾ? ಕಾಂಗ್ರೆಸ್​​ನವರು ಇದ್ದಾಗ ಬೆಲೆ ಏರಿಕೆಯಾದ್ರೆ ಆರ್ಥಿಕ ಸುಧಾರಣೆಗಾಗಿ ಅಂತಾರೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬೆಲೆ ಏರಿಕೆಯಾದ್ರೆ ಅದು ಅಕ್ರಮ ಅನೈತಿಕ ಅಂತಾರೆ ಎಂದು ಕುಟುಕಿದರು.

    ಇದನ್ನೂ ಓದಿ: ಇಳಿ ವಯಸ್ಸಿನಲ್ಲಿ ಕಾರು ಓಡಿಸುವುದನ್ನು ಕಲಿತ 90ರ ವೃದ್ಧೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಮಹಾಪೂರ!

    ರಾಜ್ಯದಲ್ಲಿ ಕಾಂಗ್ರೆಸ್ ಸೋತು ಮುಲೆಗುಂಪಾಗಿದೆ. ಅದನ್ನ ಮರೆಮಾಚಲು, ನಾವು ಬದುಕಿದ್ದೇವೆ ಅಂತ ತೋರಿಸಿಕೊಳ್ಳಲು ಈ ತರ ಮಾಡ್ತಿದ್ದಾರೆ. ಬೇರೆ ಯಾರಾದ್ರೂ ಆಗಿದ್ರೆ ಸೋತ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ತಿದ್ರು. ಇವರು ಈ ದೊಂಬರಾಟಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಕೈ ನಾಯಕರಿಗೆ ಟಾಂಗ್​ ನೀಡಿದರು.

    “ಒಂದು ಪ್ರಶ್ನೆ ಮಾಡ್ತೀನಿ. ಯಾವತ್ತಾದ್ರೂ ಪೆಟ್ರೋಲ್, ಡೀಸಲ್ ಕಡಿಮೆ ಆಗಿದೆಯಾ? ಇವತ್ತು ಪೆಟ್ರೋಲ್ ನೂರು ರೂ. ಆಗಿದೆ. ಅವರ ಕಾಲದಲ್ಲೂ ಹೆಚ್ಚಾಗಿದೆ. ಅವರಿದ್ದಾಗ ಹೆಚ್ಚಾದ್ರೆ ಗರೀಬಿ ಹಟಾವೋ, ಬಡವರ ಕಲ್ಯಾಣ. ಬಿಜೆಪಿ ಇದ್ದಾಗ ಹೆಚ್ಚಾದ್ರೆ ಭ್ರಷ್ಟಾಚಾರ! ದೇಶದಲ್ಲಿ ಮೋದಿ ಸರ್ಕಾರವಿದೆ. ಹಿಂದೆ, ಇಂದು, ಮುಂದೆಯೂ ನರೇಂದ್ರ ಮೋದಿ ಸರ್ಕಾರ ಇರಲಿದೆ. ಅವರನ್ನ ಎದುರಿಸೋ ಎದುರಾಳಿ ಯಾರೂ ಇಲ್ಲ” ಎಂದು ಅಶೋಕ್​ ಖಡಕ್​ ಆಗಿ ನುಡಿದರು.

    ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ಯಾರಿಂದ? ಮತ್ತಿಬ್ಬರ ಹೆಸರು ಪ್ರಸ್ತಾಪ…

    ಜೆಡಿಎಸ್​ ನಿಜವಾದ ವಿಪಕ್ಷ: ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಭಾಷಣಕ್ಕೆ ಕಾಂಗ್ರೆಸ್​ ಬಹಿಷ್ಕಾರ ಹಾಕುತ್ತಿರುವ ಬಗ್ಗೆ ಮಾತನಾಡಿದ ಅಶೋಕ್​, ರಾಜ್ಯಪಾಲ, ರಾಷ್ಟ್ರಪತಿ, ಸ್ಪೀಕರ್ ಯಾವುದೇ ಪಕ್ಷದ ವ್ಯಕ್ತಿಯಲ್ಲ. ಅವರಿಗೆ ಗೌರವ ಕೊಡುವ ಕೆಲಸ ಮಾಡಬೇಕು. ಆದ್ರೆ ಕಾಂಗ್ರೆಸ್​​ ಅದನ್ನ ಮಾಡದೆ ವಿರೋಧಿಸುತ್ತಿದ್ದು, ಇದಕ್ಕೆ ನಮ್ಮ ಧಿಕ್ಕಾರವಿದೆ ಎಂದರು. “ರಾಜ್​​ಕುಮಾರ್ ಅವರೇ ಹೇಳಿದ್ದಾರೆ, ನಾನು ಎಲ್ಲರಿಂದ ಕಲಿಯಬೇಕು ಅಂತ. ಹಾಗೆಯೇ ನಾವು ಓಂ ಬಿರ್ಲಾ ಅವರಿಂದ ಕಲಿಯುತ್ತೇವೆ” ಎಂದರು.

    ಅಷ್ಟಕ್ಕೇ ನಿಲ್ಲಿಸದೆ, “ನನ್ನ ಪ್ರಕಾರ ಜಂಟಿ ಅಧಿವೇಶನಕ್ಕೆ ಕಾಂಗ್ರೆಸ್‌ನವರು ಬರೋದೇ ಇಲ್ಲ. ಜೆಡಿಎಸ್​​ನವರು ಬರಲಿದ್ದಾರೆ. ಹಾಗಾಗಿ ಜೆಡಿಎಸ್ ನಿಜವಾದ ವಿರೋಧ ಪಕ್ಷ. ಅವರೇ ವಿಪಕ್ಷವಾಗಿ ಕೆಲಸ ಮಾಡ್ತಿದ್ದಾರೆ, ಕಾಂಗ್ರೆಸ್ ಎಲ್ಲೂ ಅಸ್ತಿತ್ವದಲ್ಲಿ ಇಲ್ಲ” ಎಂದು ಸಚಿವ ಅಶೋಕ್​ ಕುಟುಕಿದರು.

    ಶಾಲೆಗಳಲ್ಲಿ ಕಡ್ಡಾಯ ಕನ್ನಡ ಶಿಕ್ಷಣ: ಸರ್ಕಾರಕ್ಕೆ ಎಚ್​ಡಿಕೆ ತಾಕೀತು

    ಕರೊನಾ ಭಯ ನೀಗುವುದು ಯಾವಾಗ? ಒಳ್ಳೆಯ ದಿನಗಳು ಬರಲಿವೆ ಎನ್ನುತ್ತಾರೆ ಆಕ್ಸ್​ಫರ್ಡ್​ ವಿಜ್ಞಾನಿ

    ಸಿಧು ‘ಸೂಪರ್​ ಸಿಎಂ’ ಆಗಲು ಪ್ರಯತ್ನಿಸಿದರೆ ಕಾಂಗ್ರೆಸ್​ಗೆ ಕುತ್ತು ಎಂದ ಕ್ಯಾಪ್ಟನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts