More

    ಶಾಲೆಗಳಲ್ಲಿ ಕಡ್ಡಾಯ ಕನ್ನಡ ಶಿಕ್ಷಣ: ಸರ್ಕಾರಕ್ಕೆ ಎಚ್​ಡಿಕೆ ತಾಕೀತು

    ಬೆಂಗಳೂರು: ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ವಿರೋಧಿಸಿ ಕೆಲವರು ಹೈಕೋರ್ಟ್ ಮೊರೆ ಹೋಗಿರುವುದು ನನ್ನ ಗಮನಕ್ಕೆ ಬಂದಿದೆ. ಇದರ ವಿರುದ್ಧ ರಾಜ್ಯ ಸರಕಾರ ಸಮರ್ಥವಾಗಿ ವಾದ ನಡೆಸಿ ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಹಾಗೂ ಶಾಸಕ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಈ ಬಗ್ಗೆ ಟ್ವೀಟ್​ ಮಾಡಿರುವ ಕುಮಾರಸ್ವಾಮಿ, ರಾಜ್ಯ ಸರ್ಕಾರ ಜವಾಬ್ದಾರಿಯುತವಾಗಿ ನ್ಯಾಯಾಲಯದಲ್ಲಿ ವಾದಿಸಿ, ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಮಹತ್ವವನ್ನು ಉಚ್ಛ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕೆಂದು ನಾನು ಮಾನ್ಯ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.

    ಇದನ್ನೂ ಓದಿ: ಕನ್ನಡ ಕಲಿಯುತ್ತಿರುವ ರಾಜ್ಯಪಾಲ ಗೆಹಲೋತ್: ವಿವಿಧ ನಿಘಂಟು ಖರೀದಿ

    ಇದೇ ಸಂದರ್ಭದಲ್ಲಿ, ರಾಜ್ಯಪಾಲರಾದ ಥಾವರಚಂದ್‌ ಗೆಹ್ಲೋತ್‌ ಅವರು ಕನ್ನಡ ಕಲಿಯುತ್ತಿರುವ ಸುದ್ದಿ ಕೇಳಿ ಬಹಳ ಸಂತೋಷವಾಯಿತು ಎಂದು ಕುಮಾರಸ್ವಾಮಿ ಹೇಳಿದ್ದಾರೆ. “ಅವರ ಕನ್ನಡ ಅಭಿಮಾನ ಶ್ಲಾಘನೀಯ. ಹೊರ ರಾಜ್ಯಗಳಿಂದ ಬಂದು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಮಾನ್ಯ ರಾಜ್ಯಪಾಲರ ನಡೆ ಪ್ರೇರಣೆಯಾಗಲಿ” ಎಂದು ಟ್ವೀಟ್​ ಮಾಡಿದ್ದಾರೆ.

    ಕರೊನಾ ಭಯ ನೀಗುವುದು ಯಾವಾಗ? ಒಳ್ಳೆಯ ದಿನಗಳು ಬರಲಿವೆ ಎನ್ನುತ್ತಾರೆ ಆಕ್ಸ್​ಫರ್ಡ್​ ವಿಜ್ಞಾನಿ

    ಬಿಜೆಪಿ ನಾಯಕರ ಕಛೇರಿಯಲ್ಲಿ ಕಾರ್ಯಕರ್ತೆ ಮೇಲೆ ಲೈಂಗಿಕ ಶೋಷಣೆ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts