ಯಶವಂತಪುರ: ಕ್ಷೇತ್ರ ವ್ಯಾಪ್ತಿಯ ಕೆಂಗೇರಿ ಉಪನಗರದ ಸ್ವಾಭಿಮಾನ ಮಹಿಳಾ ಟ್ರಸ್ಟ್ ಕಚೇರಿಯಲ್ಲಿ ‘ವಿಜಯವಾಣಿ’ ಸಹಯೋಗದೊಂದಿಗೆ ಗಾರ್ನಿಯರ್ ಕಂಪನಿ ಆಯೋಜಿಸಿದ್ದ ಹೇರ್ ಕಲರಿಂಗ್ ಅಭಿಯಾನದಲ್ಲಿ ಮಹಿಳೆಯರು, ಪುರುಷರು ಸೇರಿ 200ಕ್ಕೂ ಹೆಚ್ಚು ಮಂದಿ ಕೇಶಕ್ಕೆ ಬಣ್ಣ ಹಾಕಿಸಿಕೊಳ್ಳುವ ಮೂಲಕ ವಿಜಯವಾಣಿ ಸಹಯೋಗದಲ್ಲಿ ನಡೆದ ಗಾರ್ನಿಯರ್ ಅಭಿಯಾನದ ಸದ್ಬಳಕೆ ಮಾಡಿಕೊಂಡರು.
ದೇಶದ ಖ್ಯಾತ ಹೇರ್ ಕಲರಿಂಗ್ ಸಂಸ್ಥೆಯಾದ ಗಾರ್ನಿಯರ್ ಈ ಅಭಿಯಾನಕ್ಕಾಗಿ ವಿಶೇಷ ವ್ಯವಸ್ಥೆ ಮಾಡುತ್ತಿದ್ದು, ಸಂಸ್ಥೆಯ ಹೇರ್ ಡೈ ಪರಿಣತರು ಗ್ರಾಹಕರಿಗೆ ನೇರವಾಗಿ ಹೇರ್ ಕಲರಿಂಗ್ ಮಾಡುತ್ತಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಮಹಿಳಾ ತಜ್ಞರೇ ಹೇರ್ ಡೈ ಮಾಡುತ್ತಿರುವುದು ವಿಶೇಷ.
ಅಭಿಯಾನದಲ್ಲಿ ಟ್ರಸ್ಟ್ ಅಧ್ಯಕ್ಷೆ ಅನುಪಮಾ ಪಂಚಾಕ್ಷರಿ, ಸದಸ್ಯರಾದ ಲಕ್ಷ್ಮೀ, ಲತಾ, ದ್ರಾಕ್ಷಾಯಿಣಿ, ಆಶಾ, ಪಾರ್ವತಿ ಮತ್ತಿತರರಿದ್ದರು.
ಅಭಿಯಾನದ ಸದುಪಯೋಗ ಪಡೆದುಕೊಂಡ ಸಾಕಷ್ಟು ಮಂದಿ ಸಂತಸವನ್ನ ವ್ಯಕ್ತಪಡಿಸಿದ್ದು, ಬಹಳಾ ಚೆನ್ನಾಗಿ ಕಲರಿಂಗ್ ಮಾಡುತ್ತಿದ್ದಾರೆ ಎಂದರು.
ಪತ್ರಿಕೆ ಓದುಗರಿಗೆ ಸುದ್ದಿಗಳನ್ನು ಕಟ್ಟಿಕೊಡುವುರ ಜತೆಗೆ ಇಂತಹ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಸೇವಾ ಕಾರ್ಯವನ್ನು ವಿಜಯವಾಣಿ ಪತ್ರಿಕೆ ಮುಂದುವರಿಸಲಿ ಎಂದು ಆಶಿಸಿದ್ಧಾರೆ.
ವಿಜಯವಾಣಿ ಸಹಯೋಗದಲ್ಲಿ ನಡೆಯುತ್ತಿರುವ ಈ ಉಚಿತ ಹೇರ್ ಕಲರಿಂಗ್ ಅಭಿಯಾನವು ಜುಲೈ ಕೊನೆಯವರೆಗೂ ಮುಂದುವರೆಯಲಿದ್ದು, ತಾವುಗಳೂ ಈ ಅವಕಾಶದ ಸದುಪಯೋಗವನ್ನ ಪಡೆದುಕೊಳ್ಳಬಹುದು.