

ಧನಂಜಯ ಗುರುಪುರ
ಗುರುಪುರ ಹೊಸ ಸೇತುವೆಯ ಎರಡೂ ಪಾರ್ಶ್ವದಲ್ಲಿರುವ ಕಾಲುದಾರಿ ಹಾಗೂ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಉಳಾಯಿಬೆಟ್ಟು ರಸ್ತೆ ಪಕ್ಕದಲ್ಲಿ ರಾಶಿಗಟ್ಟಲೆ ತ್ಯಾಜ್ಯ ತುಂಬಿದ್ದು, ನಿರ್ವಹಣೆ ಕೊರತೆ ಬಗ್ಗೆ ಸಾರ್ವಜನಿಕರು ಟೀಕಿಸಲಾರಂಭಿಸಿದ್ದಾರೆ.
ಗುರುಪುರ ಸೇತುವೆಯಲ್ಲಿ ವಾಹನಗಳಲ್ಲಿ ಸಾಗುವ ಮಂದಿ ಮನೆಯಲ್ಲಿ ಬಳಸಿದ ಪೂಜಾ ಸಾಮಗ್ರಿ ಹಾಗೂ ಇತರ ತ್ಯಾಜ್ಯಗಳನ್ನು ನದಿಗೆ ಎಸೆಯುತ್ತಾರೆ. ಬಹುತೇಕ ತ್ಯಾಜ್ಯ ದಿಗೆ ಬೀಳದೆ ಸೇತುವೆಯ ಕಾಲುದಾರಿಯಲ್ಲಿ ರಾಶಿಯಾಗಿದೆ. ತ್ಯಾಜ್ಯ ತುಂಬಿದ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದೆ. ಬಹುಗ್ರಾಮ ಕುಡಿಯುವ ನೀರಿಗಾಗಿ ಕೇಂದ್ರ ಸರ್ಕಾರ ಆರಂಭಿಸಿರುವ ಜಲ್ ಜೀವನ್ ಮಿಷನ್ ಯೋಜನೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಇಲ್ಲಿಂದಲೇ ನೀರು ಪೂರೈಕೆಯಾಗುತ್ತಿದ್ದರೂ ನದಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಸಂಬಂಧಪಟ್ಟ ಇಲಾಖೆ ಈವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಉಳ್ಳಾಲ ಹೊಸ ಸೇತುವೆಯಿಂದ ನೇತ್ರಾವತಿ ನದಿಗೆ ತ್ಯಾಜ್ಯ ಎಸೆಯುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಬಲೆ ಹಾಸಲಾಗಿದೆ. ಅದೇ ರೀತಿ ಗುರುಪುರ ಸೇತುವೆಗೂ ಬಲೆ ಹಾಸಿ, ವಿದ್ಯುತ್ ದೀಪ ಅಳವಡಿಸಬೇಕು. ಆತ್ಮಹತ್ಯೆಗಳು ಮತ್ತು ವಾಹನ ಅವಡಗಳ ಬಗ್ಗೆ ಕ್ರಮಕ್ಕಾಗಿ ಸೇತುವೆಗೆ ಸಿ.ಸಿ. ಕ್ಯಾಮರಾ ಅಳವಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಉಳಾಯಿಬೆಟ್ಟು ರಸ್ತೆ ತ್ಯಾಜ್ಯ
ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳಾಯಿಬೆಟ್ಟು ಮುಖ್ಯ ರಸ್ತೆಯ ಉದ್ದಕ್ಕೆ ಎರಡೂ ಪಾರ್ಶ್ವದಲ್ಲಿ ತ್ಯಾಜ್ಯ ರಾಶಿ ತುಂಬಿದೆ. ಈ ವಾರ್ಗವಾಗಿ ಸಾಗುವ ವಾಹನ ಸವಾರರು ಮತ್ತು ಸ್ಥಳೀಯರು ರಸ್ತೆ ಪಕ್ಕದಲ್ಲಿ ತ್ಯಾಜ್ಯ ಎಸೆಯುತ್ತಾರೆ. ಪ್ಲಾಸ್ಟಿಕ್ ತ್ಯಾಜ್ಯ ಮತ್ತು ವಾಂಸದಂತಹ ಹಸಿ ತ್ಯಾಜ್ಯ ರಾಶಿ ಬಿದ್ದಿರುವಲ್ಲಿ ನಾಯಿಗಳು ಮತ್ತು ದನಕರುಗಳು ಅಡ್ಡಾದಿಡ್ಡಿ ಓಡಾಡುತ್ತವೆ. ಇದರಿಂದ ಸಾರ್ವಜನಿಕರು ಮತ್ತು ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ರಾಷ್ಟ್ರೀಯ ಹೆದ್ದಾರಿ 169ರಿಂದ ಉಳಾಯಿಬೆಟ್ಟು ಕಿರು ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮನಪಾ ವ್ಯಾಪ್ತಿಯಲ್ಲಿದೆ. ರಸ್ತೆ ಪಕ್ಕದಲ್ಲಿ ರಾಶಿಗಟ್ಟಲೆ ತ್ಯಾಜ್ಯ ತುಂಬಿರುವ ಬಗ್ಗೆ ಮನಪಾ ಸ್ಥಳೀಯ ಕಾರ್ಪೋರೇಟರ್ ಗಮನಕ್ಕೆ ತರಲಾಗಿತ್ತು. ಇಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸುವಂತೆ ಮನಪಾ ಆಯುಕ್ತರಿಗೆ ಪತ್ರ ಬರೆದಿದ್ದೆವು. ಒಂದೆರಡು ಬಾರಿ ಮನಪಾ ಹಾಗೂ ಪಂಚಾಯಿತಿ ಆಡಳಿತ ಇಲ್ಲಿನ ತ್ಯಾಜ್ಯ ವಿಲೇವಾರಿ ವಾಡಿದ್ದರೂ ರಾತ್ರಿ ವೇಳೆ ರಸ್ತೆ ಪಕ್ಕದಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಇದರಲ್ಲಿ ಸ್ಥಳೀಯರ ತ್ಯಾಜ್ಯದ ಪಾಲೂ ಇದೆ. ಮತ್ತೊಂದು ಬಾರಿ ಕಾರ್ಪೋರೇಟರ್ ಗಮನಹರಿಸಲಾಗುವುದು. - ಹರಿಕೇಶ್ ಶೆಟ್ಟಿ, ಅಧ್ಯಕ್ಷರು, ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ https://www.vijayavani.net/knowledge-of-science-and-technology-brings-new-vitality https://www.vijayavani.net/8th-house-is-assigned-by-chinmaya-mission