ಗಾಂಜಾ ವಶ, ಮೂವರ ಬಂಧನ

ganja
Published on

ಕಾಸರಗೋಡು: ಮಂಜೇಶ್ವರ ಹಾಗೂ ಬದಿಯಡ್ಕ ಠಾಣೆ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಗಾಂಜಾ, ಎಂಡಿಎಂಎ ಸೇರಿದಂತೆ ಮಾದಕ ದ್ರವ್ಯ ಸಾಗಿಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಮಂಜೇಶ್ವರ ಠಾಣೆ ಪೊಲೀಸರು ಶುಕ್ರವಾರ ತಡರಾತ್ರಿ ಮೊರತ್ತಣೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರಲ್ಲಿ ಸಾಗಿಸುತ್ತಿದ್ದ 97ಗ್ರಾಂ ಎಂಡಿಎಂಎ ವಶಪಡಿಸಿಕೊಂಡು ಹೊಸಂಗಡಿ ನಿವಾಸಿ ಮಹಮ್ಮದ್ ಅಲ್ತಾಫ್ ಎಂಬಾತನನ್ನು ಬಂಧಿಸಿದ್ದಾರೆ.

ಬದಿಯಡ್ಕ ಠಾಣೆ ಪೊಲೀಸರು ಬೇಳ ಪೆರಿಯಡ್ಕದ ಮನೆಯೊಂದಕ್ಕೆ ದಾಳಿ ನಡೆಸಿ 1.92ಗ್ರಾಂ ಎಂಡಿಎಂಎ, 41.30ಗ್ರಾಂ ಗಾಂಜಾ ಹಾಗೂ 13,500 ರೂ. ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೆರಿಯಡ್ಕ ಕುಂಜಾರು ನಿವಾಸಿ ಇಬ್ರಾಹಿಂ ಇಸ್ಪಾಕ್ ಕೆ.ಎ ಹಾಗೂ ಬೇಳ ಮೆಣಸಿನಪಾರೆ ನಿವಾಸಿ ಮಹಮ್ಮದ್ ರಫೀಕ್ ಎಂಬವರನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net