

ಕಾಸರಗೋಡು: ವಿದ್ಯಾನಗರ ಠಾಣೆ ಪೊಲೀಸರು ಉಳಿಯತ್ತಡ್ಕದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ, ಗಾಂಜಾ ದಾಸ್ತಾನಿರಿಸಿದ್ದ ಉಳಿಯತ್ತಡ್ಕದ ಕ್ವಾರ್ಟರ್ಸ್ ಒಂದರ ನಿವಾಸಿ ಎನ್.ಎ.ಇರ್ಷಾದ್ ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ 824 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕ್ವಾರ್ಟರ್ಸ್‌ನೊಳಗೆ ಗಾಂಜಾ ದಾಸ್ತಾನಿರಿಸಿಕೊಂಡಿದ್ದ ಬಗ್ಗೆ ಲಭಿಸಿದ ಖಚಿತ ಮಾಹಿತಿಯನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.