ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಕುಂದಾಪುರದ ಆಡಳಿತ ಸೌಧದ ಕೋರ್ಟ್ ಹಾಲ್‌ನಲ್ಲಿ ಗುರುವಾರ ನಡೆಯಿತು.
ಈವರೆಗಿನ ಮಾಹಿತಿ ಪ್ರಕಾರ 33 ಸದಸ್ಯ ಬಲದ ಗಂಗೊಳ್ಳಿ ಗ್ರಾಮ ಪಂಚಾಯಿತಿನಲ್ಲಿ 8 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರೆ, 7 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಎಸ್‌ಡಿಪಿಐ ಬೆಂಬಲಿತ 4 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಇಬ್ಬರು ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಬೆಳಗ್ಗೆ ವೇಳೆ ಮಂದಗತಿಯಲ್ಲಿ ಸಾಗಿದ ಮತ ಎಣಿಕೆ ಕಾರ್ಯ ರಾತ್ರಿವರೆಗೂ ಸಾಗಿತ್ತು. ಪ್ರತಿಯೊಂದು ಕ್ಷೇತ್ರಕ್ಕೆ ಒಂದು ಟೇಬಲ್‌ನಂತೆ ಮೂರು ಸುತ್ತುಗಳಲ್ಲಿ ಮತ ಎಣಿಕೆ ನಡೆಸಲಾಯಿತು. ಮತ ಎಣಿಕೆ ಕಾರ್ಯ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕುಂದಾಪುರ ಆಡಳಿತ ಸೌಧದಲ್ಲಿ ಮತ ಎಣಿಕೆ ಕಾರ್ಯ ನಡೆದ ಹಿನ್ನೆಲೆಯಲ್ಲಿ ಜನರಿಗೆ ಆಡಳಿತ ಸೌಧ ಪ್ರವೇಶ ನಿಷೇಧಿಸಲಾಗಿತ್ತು. ಕಳೆದ ಆಡಳಿತದ ಅವಧಿಯಲ್ಲಿ 23 ಬಿಜೆಪಿ ಬೆಂಬಲಿತರು, 6 ಕಾಂಗ್ರೆಸ್ ಬೆಂಬಲಿತರು ಮತ್ತು ನಾಲ್ವರು ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.
ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು, ಯುವಜನ ಸೇವಾ ಅಧಿಕಾರಿ ಕುಸುಮಾರ ಶೆಟ್ಟಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಕುಂದಾಪುರ ಇನ್ಸ್‌ಪೆಕ್ಟರ್ ನಂಜಪ್ಪ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.
ಫಲಿತಾಂಶ
ಗಂಗೊಳ್ಳಿ-1: ಗುರುರಾಜ್ (558), ನಾಗರಾಜ ಖಾರ್ವಿ (546), ರೇಖಾ ಖಾರ್ವಿ (483), ಸರೋಜ ಕೃಷ್ಣ ಪೂಜಾರಿ (462), ನಾಗರತ್ನ ಶೇರುಗಾರ್ (396)- ಬಿಜೆಪಿ ಬೆಂಬಲಿತರು.
ಗಂಗೊಳ್ಳಿ-2: ತಬ್ರೈಜ್ (578), ರಜಬ್ (516), ಅಬೂಬಕರ್ ನಾಖುದಾ (505) ಮತ್ತು ಶರೀನಾ (530)- ಎಸ್‌ಡಿಪಿಐ ಬೆಂಬಲಿತರು.
ಗಂಗೊಳ್ಳಿ-3: ಗೋಪಾಲ ಖಾರ್ವಿ (356), ಮಮತಾ ಎಸ್.ಗಾಣಿಗ (346)-ಪಕ್ಷೇತರರು, ದೀಪಾ (225) ಮತ್ತು ಶ್ಯಾಮಲಾ ಶೆಡ್ತಿ (251)-ಬಿಜೆಪಿ ಬೆಂಬಲಿತರು.
ಗಂಗೊಳ್ಳಿ-4: ದೇವೇಂದ್ರ ಖಾರ್ವಿ (412), ಶೋಭಾ ಕೃಷ್ಣ ಬಿಲ್ಲವ (331), ಅಮ್ಮು ಮೊಗೇರ‌್ತಿ (291)-ಕಾಂಗ್ರೆಸ್ ಬೆಂಬಲಿತರು, ಮಹೇಶ್ (275) ಬಿಜೆಪಿ ಬೆಂಬಲಿತ.
ಗಂಗೊಳ್ಳಿ -5: ಜಯೇಂದ್ರ ಖಾರ್ವಿ (505), ಗಣೇಶ ಪೂಜಾರಿ (344), ಜನ್ನಿ ಖಾರ್ವಿ (352), ಲಕ್ಷ್ಮೀ ಪೂಜಾರಿ (326)-ಕಾಂಗ್ರೆಸ್ ಬೆಂಬಲಿತರು.