

ಗಂಗಾವತಿ: ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನೆ ಸಮಿತಿ (ಕೆಡಿಪಿ)ಗೆ ಸರ್ಕಾರದಿಂದ ನಾಮನಿರ್ದೇಶನಗೊಂಡ ಐವರು ಸದಸ್ಯರಿಗೆ ನಗರದ ತಾಪಂ ಕಚೇರಿಯಲ್ಲಿ ಬುಧವಾರ ಆದೇಶ ಪತ್ರ ವಿತರಿಸಲಾಯಿತು.
ಉಮೇಶ ಅಯ್ಯಣ್ಣ ಹೇರೂರು, ನಾಗಣ್ಣಗೌಡ ಆಚಾರನರಸಾಪುರ, ರಫೀಕ್ ಸಂಪಂಗಿ, ಭೀಮೇಶ, ವೆಂಕಟೇಶ ಮಲಕನಮರಡಿ ನೇಮಕಗೊಂಡಿದ್ದು, ತಾಲೂಕುಮಟ್ಟದಲ್ಲಿ ನಡೆಯುವ ತ್ರೈಮಾಸಿಕ ಪರಿಶೀಲನೆ ಸಮಿತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದೆ. ತಾಪಂ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಾಮನಿರ್ದೇಶಿತರಿಗೆ ತಾಪಂ ಇಒ ಲಕ್ಷ್ಮೀದೇವಿಯಾದವ್ ಆದೇಶ ಪತ್ರ ವಿತರಿಸಿದರು. ಜು.6ರಂದು ನಡೆಯುವ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದರು.
ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್ ಮಾತನಾಡಿ, ನಾಮನಿರ್ದೇಶಿತ ಸದಸ್ಯರು, ಸಭೆಯಲ್ಲಿನ ವಿಷಯಗಳನ್ನು ತಿಳಿದುಕೊಳ್ಳಬೇಕಿದ್ದು, ಗ್ರಾಮಾಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಪ್ರಸ್ತಾಪಿಸುವಂತೆ ಸಲಹೆ ನೀಡಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ.ವೆಂಕಟೇಶಬಾಬು, ಪಿಎಸ್ಸೆಸ್ಸೆನ್ ನಿರ್ದೇಶಕ ವಿಶ್ವನಾಥ ಮಾಲಿ ಪಾಟೀಲ್, ನಗರಸಭೆ ಮಾಜಿ ಸದಸ್ಯ ಹುಸೇನಪ್ಪ ಹಂಚಿನಾಳ್ ಇತರರಿದ್ದರು.