ಗಂಗಾವತಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದ್ದು, ನ್ಯಾಯಯುತ ಹಕ್ಕುಗಳನ್ನು ನೀಡುವಲ್ಲಿ ವಿಲವಾಗಿವೆ ಎಂದು ಎಐಸಿಸಿಟಿಯು ಜಿಲ್ಲಾಧ್ಯಕ್ಷ ವಿಜಯದೊರೈರಾಜು ಹೇಳಿದರು.

ನಗರದ 5ನೇ ವಾರ್ಡ್ ಆಶುರ್‌ಖಾನ್ ಬಳಿ ಅಖಿಲ ಭಾರತ ಸಂಘಟನೆಗಳ ಕೇಂದ್ರೀಯ ಸಮಿತಿ ಮತ್ತು ಎಐಸಿಸಿಟಿಯುನಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾರ್ವತ್ರಿಕ ಮುಷ್ಕರ ಅಭಿಯಾನದಲ್ಲಿ ಮಾತನಾಡಿದರು.
ಕಾರ್ಮಿಕರು ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುವುದು ಅನಿವಾರ್ಯವಾಗಿದ್ದು, ಸಂಘಟನಾತ್ಮಕವಾಗಿ ಪಡೆದುಕೊಳ್ಳಬೇಕಿದೆ. ದೇಶದಾದ್ಯಂತ ಮೇ 20ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಂಡಿದ್ದು, ಪ್ರತಿಯೊಬ್ಬ ಕಾರ್ಮಿಕರು ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.
ಪ್ರಗತಿಪರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪ್ರತಿನಿಧಿ ಅಬ್ದುಲ್ ಮಾತನಾಡಿ, ಕಾರ್ಮಿಕರ ಮಕ್ಕಳಿಗೆ ದೊರೆಯಬೇಕಾದ ಶಿಕ್ಷಣ ಹಕ್ಕು ಸಮರ್ಪಕ ಅನುಷ್ಠಾನಗೊಳ್ಳುತ್ತಿಲ್ಲ. ಕೇವಲ ಕಿಟ್‌ಗಳನ್ನು ಕೊಡುವ ಮೂಲಕ ಕಾರ್ಮಿಕರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದರು.
ವಿವಿಧ ಸಂಘಟನೆ ಪದಾಧಿಕಾರಿಗಳಾದ ಬಾಬರ್, ಕೃಷ್ಣಸ್ವಾಮಿ, ಖಾಸೀಂ, ಮಹೆಬೂಬ್ ಸೇರಿ ಗಂಗಾವತಿ ಮತ್ತು ಕಾರಟಗಿ ಭಾಗದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಭಾಗವಹಿಸಿದ್ದರು.