ಸಜ್ಜನರ ಸಹವಾದಿಂದ ಭವಿಷ್ಯ ಉಜ್ವಲ, ಕೇಂಬ್ರಿಡ್ಜ್ ಶಾಲೆ ಆಡಳಿತಾಧಿಕಾರಿ ಲೀಲಾ ಮಲ್ಲಿಕಾರ್ಜುನ ಅನಿಸಿಕೆ

Vachana Shravan program
ಗಂಗಾವತಿ ಜಯನಗರದ ಗುತ್ತೇದಾರ್ ನಿವಾಸದಲ್ಲಿ ಹಮ್ಮಿಕೊಂಡಿದ್ದ ತಿಂಗಳ ಪರ್ಯಂತ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಕಾರಟಗಿ ಕೇಂಬ್ರಿಡ್ಜ್ ಶಾಲೆ ಆಡಳಿತಾಧಿಕಾರಿ ಲೀಲಾ ಮಲ್ಲಿಕಾರ್ಜುನ ಗುರುವಾರ ಮಾತನಾಡಿದರು. ಸಾಹಿತಿ ಕಂಪ್ಲಿಯ ಕೆ.ಎಂ.ಹೇಮಯ್ಯಸ್ವಾಮಿ, ಶಸಾಪ ತಾಲೂಕಾಧ್ಯಕ್ಷ ಜೆ.ನಾಗರಾಜ್, ಬಸವಕೇಂದ್ರದ ಅಧ್ಯಕ್ಷ ಕೆ.ಬಸವರಾಜ್, ವಕೀಲ ನಾಗರಾಜ್ ಗುತ್ತೇದಾರ್ ಇತರರಿದ್ದರು.
Published on

ಗಂಗಾವತಿ: ಸಹವಾಸದಂತೆ ಸಲಹೆಗಳು ಸೃಷ್ಟಿಯಾಗಲಿದ್ದು, ಒಂದೇ ಮಣ್ಣಿನಲ್ಲಿ ಹಣ್ಣುಗಳ ಬೆಳೆದರೂ ಅದರ ಸ್ವಾದಿಷ್ಟ ವಿಭಿನ್ನವಾಗಿರುತ್ತದೆ ಎಂದು ಕಾರಟಗಿ ಕೇಂಬ್ರಿಡ್ಜ್ ಶಾಲೆ ಆಡಳಿತಾಧಿಕಾರಿ ಲೀಲಾ ಮಲ್ಲಿಕಾರ್ಜುನ ಹೇಳಿದರು.

ನಗರದ ಜಯನಗರದ ಗುತ್ತೇದಾರ್ ನಿವಾಸದಲ್ಲಿ ಬಸವಪರ ಸಂಘಟನೆಗಳ ನೇತೃತ್ವದಲ್ಲಿ ತಿಂಗಳ ಪರ್ಯಂತ ಹಮ್ಮಿಕೊಂಡ ವಚನ ಶ್ರಾವಣ ಕಾರ್ಯಕ್ರಮಕ್ಕೆ ಗುರುವಾರ ರಾತ್ರಿ ಚಾಲನೆ ನೀಡಿ ಮಾತನಾಡಿದರು.

ನಿಂಬೆ, ಮಾವು, ತೆಂಗು ಸೇರಿ ವಿವಿಧ ಹಣ್ಣುಗಳು ಒಂದೇ ಮಣ್ಣಿನಲ್ಲಿ, ಒಂದೇ ನೀರೂಂಡು ಬೆಳೆದರೂ ರುಚಿ ಮಾತ್ರ ವಿಭಿನ್ನವಾಗಿರುತ್ತೆ. ಅದರಂತೆ ಸಹವಾಸದ ಹಿನ್ನೆಲೆಯಲ್ಲಿ ನಮ್ಮ ಜೀವನ ರೂಪುಗೊಳ್ಳುತ್ತಿದ್ದು, ಮಾನವೀಯತೆ ಮತ್ತು ಸೇವಾ ಕಾರ್ಯಗಳ ಮೂಲಕ ಭಕ್ತಿ ಪ್ರದರ್ಶಿಸಬೇಕು. ನೈರ್ಮಲ್ಯ ಶುದ್ಧತೆಗೆ ಶ್ರಮಿಸುವ ಪೌರ ಕಾರ್ಮಿಕರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ವಚನ ಶ್ರಾವಣದ ಮೊದಲ ದಿನ ಶಿವಶರಣೆ ಅಕ್ಕಮಹಾದೇವಿ ವಚನದ ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಮನೆಮನೆಗಳಿಂದ ಮನಮನಗಳಿಗೆ ವಚನ ಸಂದೇಶ ಪರಿಕಲ್ಪನೆಯಡಿ ಜು.24ರಿಂದ ಆ.24ರವರೆಗೆ ವಚನ ಶ್ರಾವಣ ಜರುಗಲಿದೆ ಎಂದು ಬಸವ ಕೇಂದ್ರದ ಪ್ರತಿನಿಧಿ ಎ.ಕೆ.ಮಹೇಶಕುಮಾರ ತಿಳಿಸಿದರು.

ಸಾಹಿತಿ ಕಂಪ್ಲಿಯ ಕೆ.ಎಂ.ಹೇಮಯ್ಯಸ್ವಾಮಿ, ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಜೆ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಪಟ್ಟಣಶೆಟ್ಟಿ, ಬಸವಕೇಂದ್ರದ ಅಧ್ಯಕ್ಷ ಕೆ.ಬಸವರಾಜ್, ವಕೀಲ ನಾಗರಾಜ್ ಗುತ್ತೇದಾರ್, ಕೆ.ಎಂ.ಹೇಮಯ್ಯಸ್ವಾಮಿ, ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಕೆ.ವೀರೇಶರಡ್ಡಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಚನ್ನಬಸವ ಕೊಟಗಿ, ಗುಗ್ರಿ ತಿಪ್ಪಣ್ಣ ರಾಜಶೇಖರ್ ವೈಜಾಪುರ್, ಕೆ.ಪಂಪಣ್ಣ, ಗಾಳಿ ಶಿವು, ದರೋಜಿ ರಂಗಣ್ಣ, ಮೆಟ್ರಿ ಶರಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net