

ಗಂಗಾವತಿ: ವಿವಿಧ ಇಲಾಖೆ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕ ಉತ್ಸವವನ್ನು ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಯು.ನಾಗರಾಜ್ ಹೇಳಿದರು.
ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ನಗರದ ತಾಪಂ ಮಂಥನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಗರದ ಎಲ್ಲ ವೃತ್ತ ಮತ್ತು ಕಚೇರಿಗಳನ್ನು ವಿದ್ಯುತ್ ದೀಪದಿಂದ ಅಲಂಕರಿಸಲಾಗುವುದು. ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣದ ನಂತರ ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಹೈ.ಕ.ಹೋರಾಟದ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸವಿದೆ. ಶಾಲಾ ಮಕ್ಕಳಿಗಾಗಿ ಕ್ರೀಡಾಂಗಣದಲ್ಲಿ ಕುಡಿವ ನೀರು, ಲಘು ಉಪಹಾರದ ವ್ಯವಸ್ಥೆ ಮಾಡಲಾಗುವುದು. ವೇದಿಕೆ, ಸಾಂಸ್ಕೃತಿಕ ಕಾರ್ಯಕ್ರಮ, ಧ್ವಜಾರೋಹಣ, ವೃತ್ತಗಳ ಅಲಂಕಾರ ಸೇರಿ ವಿವಿಧ ವ್ಯವಸ್ಥೆಯನ್ನು ಅಯಾ ಇಲಾಖೆಗೆ ಜವಾಬ್ದಾರಿ ನೀಡಲಾಗುವುದು ಎಂದರು.
ಶಾಲಾ ಮಕ್ಕಳಿಗಾಗಿ ಬಸ್ ವ್ಯವಸ್ಥೆ, ಮೈದಾನದ ದುರಸ್ತಿ ಸೇರಿ ವಿವಿಧ ವ್ಯವಸ್ಥೆ ಕೈಗೊಳ್ಳುವಂತೆ ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದರು. ಬಿಇಒ ವೆಂಕಟೇಶ ರಾಮಚಂದ್ರಪ್ಪ, ತಾಪಂ ಇಒ ಲಕ್ಷ್ಮಿದೇವಿಯಾದವ್, ನಗರಸಭೆ ಪರಿಸರ ಇಂಜಿನಿಯರ್ ಹೇಮಂತನಾಯ್ಕ, ಆರೋಗ್ಯ ನಿರೀಕ್ಷಕ ನಾಗರಾಜ್, ಸಿಡಿಪಿಒ ಜಯಶ್ರೀ, ಜಿಪಂ ಪ್ರಭಾರ ಎಇಇ ವಿಜಯಕುಮಾರ, ಕನ್ನಡಪರ ಸಂಘಟನೆ ಪದಾಧಿಕಾರಿಗಳಾದ ಚನ್ನಬಸವ ಜೇಕಿನ್, ರಮೇಶಕೋಟಿ, ಬಸವರಾಜ ಮ್ಯಾಗಳಮನಿ,ಮಂಜುನಾಥ ಪತ್ತಾರ್ ಇತರರಿದ್ದರು.
ವಿಶ್ವಕರ್ಮ ಜಯಂತಿ ಪೂರ್ವಭಾವಿ ಸಭೆ: ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ ಕುರಿತು ಪೂರ್ವಭಾವಿ ಆಯೋಜಿಸಲಾಗಿತ್ತು. ವಿಶ್ವಕರ್ಮ ವೃತ್ತಕ್ಕೆ ಹೂವಿನ ಅಲಂಕಾರ, ಕಲಾತಂಡಗಳ ವ್ಯವಸ್ಥೆ, ವಿಶ್ವಕರ್ಮ ಕುರಿತು ಮಕ್ಕಳಿಗೆ ಪ್ರಬಂಧ, ಭಾಷಣ ಸ್ಪರ್ಧೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ವಿಶ್ವಕರ್ಮ ಸಮಾಜದ ಮುಖಂಡರು ಒತ್ತಾಯಿಸಿದರು. ಸಮಾಜದ ಜಿಲ್ಲಾಧ್ಯಕ್ಷ ಕೆ.ನಾಗೇಶಕುಮಾರ, ಮಂಜುನಾಥ ಪತ್ತಾರ್, ಸುನೀಲ್‌ಕುಮಾರ ಪತ್ತಾರ್, ಕಾಳೇಶ ಬಡಿಗೇರ್, ಚಿದಂಬರ್ ಪತ್ತಾರ್, ಸಿದ್ದು ಕಮ್ಮಾರ್, ಮಾನಪ್ಪ ಬಡಿಗೇರ್, ನಾರಾಯಣಪ್ಪ ಪತ್ತಾರ್ ಇತರರಿದ್ದರು.