ವೇತನ ಪಾವತಿಗೆ ವಿಳಂಬ ನೀತಿ, ರಾಜ್ಯ ಸರ್ಕಾರದ ನಡೆಗೆ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಕ್ರೋಶ

indefinite strike
ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಗಂಗಾವತಿ ತಾಪಂ ಆವರಣದ ಸಾಮರ್ಥ್ಯ ಸೌಧದ ಮುಂದೆ ಕೆಲಸ ಸ್ಥಗಿತಗೊಳಿಸಿ ಮಂಗಳವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿರುವುದು. ಜಿಲ್ಲಾಧ್ಯಕ್ಷ ಕೊಟ್ರೇಶ ಜವಳಿ, ಪದಾಧಿಕಾರಿಗಳಾದ ಬಾಳಪ್ಪ ತಾಳಕೇರಿ, ಶರಣಯ್ಯ, ಮಲ್ಲಮ್ಮ, ಸುಜಾತಾ ಇತರರಿದ್ದರು.
Published on

ಗಂಗಾವತಿ: ಬಾಕಿ ವೇತನ, ಸೇವಾಭದ್ರತೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನಗರದ ತಾಪಂ ಆವರಣದ ಸಾಮರ್ಥ್ಯ ಸೌಧದ ಮುಂದೆ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ಮಂಗಳವಾರದಿಂದ ಆರಂಭಿಸಿದರು.

ಬೇರ್ ೂಟ್ ಟೆಕ್ನಿಷಿಯನ್ ಸಂಘ, ಗ್ರಾಮಕಾಯಕ ಮಿತ್ರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರೊಂದಿಗೆ ಧರಣಿ ಹಮ್ಮಿಕೊಳ್ಳಲಾಗಿದೆ. ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೊಟ್ರೇಶ ಜವಳಿ ಮಾತನಾಡಿ, ಕಳೆದ 15 ವರ್ಷಗಳಿಂದ ನರೇಗಾ ಯೋಜನೆಯಡಿ ರಾಜ್ಯದಲ್ಲಿ 5ಸಾವಿರಕ್ಕೂ ಹೆಚ್ಚು ನೌಕರರು ವಿವಿಧ ಹಂತದಲ್ಲಿ ದುಡಿಯುತ್ತಿದ್ದು, ಸೇವಾಭದ್ರತೆಯಿಲ್ಲದಂತಾಗಿದೆ. ಆರೋಗ್ಯ ವಿಮೆ ಕೇಳಿದರೂ ನೀಡಿಲ್ಲ. ಕಳೆದ 6 ತಿಂಗಳಿಂದ ವೇತನ ಪಾವತಿಯಾಗದಿದ್ದರಿಂದ ಕುಟುಂಬ ನಿರ್ವಹಣೆ ದುಸ್ತರವಾಗಿದ್ದು, ಮಕ್ಕಳ ಶಿಕ್ಷಣಕ್ಕೂ ಹಣವಿಲ್ಲದಂತಾಗಿದೆ. ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ರಾಜ್ಯ ಸರ್ಕಾರ ನೌಕರರ ವೇತನ ಪಾವತಿಸುವಲ್ಲಿ ತಾಂತ್ರಿಕ ಕಾರಣ ಹೇಳಿ ವಿಳಂಬ ಮಾಡುತ್ತಿದೆ ಎಂದು ದೂರಿದರು.

ಬೇರ್ ೂಟ್ ಟೆಕ್ನಿಷಿಯನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಢಣಾಪುರ ಮಾತನಾಡಿ, ಬಿಎ್ಟಿಗಳ ಪ್ರತಿ ವರ್ಷದ ನವೀಕರಣ ಪದ್ಧತಿ ಕೈಬಿಡಬೇಕು. ಬಿಎ್ಟಿಗಳ ವೇತನ ಪಾವತಿಯಲ್ಲಿ ಗೌರವಧನ ಎಂದು ನೀಡುತ್ತಿದ್ದು, ಇದನ್ನು ವೇತನ ರೂಪದಲ್ಲಿ ನೀಡಬೇಕು. ಮರುಮೌಲ್ಯಮಾಪನ ಪದ್ಧತಿ ಕೈಬಿಡುವುದು, ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಲು ಪಿಠೋಪಕರಣ ವ್ಯವಸ್ಥೆ, ಸಕಾಲಕ್ಕೆ ವೇತನ ಪಾವತಿ, ಆರೋಗ್ಯ ವಿಮೆ ಸೇರಿ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಶರಣಯ್ಯ, ಬಾಳಪ್ಪ ತಾಳಕೇರಿ, ಶರಣಬಸವ ಮಾ.ಪಾಟೀಲ್, ಬಸವರಾಜ ಜಟಗಿ, ಉದಯಕುಮಾರ, ರಮೇಶ, ಸಂಗಮೇಶ, ಶ್ವೇತಾ, ಹನುಮೇಶ, ಯಂಕೋಬ ಸಾಲಿ, ಹನುಮೇಶ, ಮಲ್ಲಮ್ಮ ಪಲ್ಲೇದ್, ಸುಜಾತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net