ವಿವಾದಕ್ಕೀಡಾಯ್ತು ಅಂಬೇಡ್ಕರ್ ಹೋಲಿಕೆಯ ಗಣೇಶ ಮೂರ್ತಿ ಪ್ರತಿಷ್ಠಾಪನೆ!; ದಲಿತರ 2 ಗುಂಪುಗಳ ಮಧ್ಯೆ ವಾಗ್ವಾದ..

1338455
Published on

ಕೊಪ್ಪಳ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಹೋಲುವ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಕೊಪ್ಪಳ ಜಿಲ್ಲೆ ಗಂಗಾವತಿಯ ಅಂಬೇಡ್ಕರ್ ನಗರದಲ್ಲಿ ಶ್ರೀ ವಿನಾಯಕ ಸ್ನೇಹ ವೃಂದದವರು ಈ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಇದನ್ನು ದಲಿತ ಸಮುದಾಯದವರು ತೀವ್ರವಾಗಿ ವಿರೋಧಿಸಿದ್ದಾರೆ. ಈ ಗಣೇಶನನ್ನು ವಿಸರ್ಜನೆ ಮಾಡಿದರೆ ಅಂಬೇಡ್ಕರ್ ಅವರನ್ನೇ ವಿಸರ್ಜನೆ ಮಾಡಿದಂತಾಗುತ್ತದೆ ಎಂಬುದು ಅವರ ವಾದ.

ದಲಿತ ಸಮುದಾಯದ ಎರಡು ಗುಂಪುಗಳ ನಡುವೆ ಉಂಟಾದ ಈ ಅಭಿಪ್ರಾಯ ಭೇದ ನಿನ್ನೆ ವಾಗ್ವಾದದ ರೂಪ ಪಡೆದಿತ್ತು. ಪೊಲೀಸರ ಜತೆಗೂ ಕೆಲವರು ತೀವ್ರ ವಾಗ್ವಾದ ನಡೆಸಿದ್ದರು. ನಂತರ ಈ ಮೂರ್ತಿ ತಯಾರಿಸಿದವರು ಮತ್ತು ಪ್ರತಿಷ್ಠಾಪನೆ ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೂರ್ತಿ ಪ್ರತಿಷ್ಠಾಪಿಸಿದ ಸಂಸ್ಥೆಯ ವಿರುದ್ಧ ಇಂದು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net